Karnataka Rain: ರಾಜ್ಯದಲ್ಲಿ 3 ದಿನ ಗುಡುಗು ಸಹಿತ ಭಾರೀ ಮಳೆ – ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ.

Karnataka Rain : ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಪೂರ್ವ ಮಾನ್ಸೂನ್ ಮಳೆಯಾಗ್ತಿದ್ದು, ಕಳೆದ ಒಂದು ವಾರದಲ್ಲೇ ಹಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಇದೀಗ ಇನ್ನೂ ಮೂರು ದಿನಗಳ ಕಾಲ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ
ಹೌದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭಾರೀ ಮಳೆಯಾಗಿತ್ತು. ಇದೀಗ ಮತ್ತೆ ಮುಂದಿನ 3 ದಿನಗಳ ಕಾಲ ರಾಜ್ಯದ ವಿವಿಧೆಡೆ ಆಲಿಕಲ್ಲು ಸಹಿತ ಮಳೆಯಾಗೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
READ THIS : ಅಮ್ಮನ ಕಣ್ಣೆದುರೇ ನರಳಿ ನರಳಿ ಪ್ರಾಣಬಿಟ್ಟ ಕಂದಮ್ಮ!

ರೈತರಿಗೆ ಸಾಕಷ್ಟು ನಷ್ಟ
ಇನ್ನು ಆಲಿಕಲ್ಲಿನ ಮಳೆಯಿಂದಾಗಿ ರೈತರಿಗೆ ಸಾಕಷ್ಟು ನಷ್ಟ ಎದುರಾಗಿತ್ತು. ಈಗ ಮತ್ತೇ ಮಳೆ ಶುರುವಾಗಲಿದ್ದು, ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಯಚೂರು, ಕೊಪ್ಪ, ಗದಗ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಮೈಸೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ತಂಪು ವಾತಾವರಣ
ಇನ್ನು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಚದುರಿದಂತೆ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಈ ಮೂಲಕ ಬಿರು ಬೇಸಿಗೆ ನಡುವೆಯೂ ಮಳೆರಾಯ ಒಂದಷ್ಟು ತಂಪು ವಾತಾವರಣ ಸೃಷ್ಟಿಸ್ತಿದ್ದಾನೆ.

ಕಲಘಟ್ಟಗಿಯಲ್ಲಿ ಜಮ್ಮು ಕಾಶ್ಮೀರದ ವಾತಾವರಣ
ಧಾರವಾಡ ಜಿಲ್ಲೆ ಕಲಘಟ್ಟಗಿಯಲ್ಲಂತೂ ಜಮ್ಮುಕಾಶ್ಮೀರದ ವಾತಾವರಣ ಸೃಷ್ಟಿಯಾಗಿತ್ತು. ರಸ್ತೆಯುದ್ದಕ್ಕೂ ಆಲಿಕಲ್ಲುಗಳು ಮಲ್ಲಿಗೆ ಹೂವಿನ ಹಾಸಿಗೆಯಂತೆ ಗೋಚರಿಸುತ್ತಿದ್ದವು. ಇದು ಕಲಘಟ್ಟಗಿ ಮಾತ್ರವಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಈ ಅನುಭೂತಿಯನ್ನು ನೀಡಿದೆ.
MUST WATCH : ಕೋತಿಯ ಕಿತಾಪತಿಯಿಂದ ಸಿಕ್ಕ ಸಿಕ್ಕವರ ಮೇಲೆ ಹೆಜ್ಜೇನು ATTACK- ಓರ್ವ ದಾರುಣ ಸಾ*




