ಮಾರ್ಚ್ 18ರಿಂದ SSLC ಪರೀಕ್ಷೆ ಆರಂಭವಾಗಲಿದೆ. 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಜಾರಿಗೆ. ಇಲಾಖೆಯ ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ.

ಮಾರ್ಚ್ 18ರಿಂದ ರಾಜ್ಯಾದ್ಯಂತ SSLC ಪರೀಕ್ಷೆಗಳು ಆರಂಭವಾಗಲಿವೆ. ಒಟ್ಟು 2871 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ನೋಂದಣಿ
ಈ ವರ್ಷ 9,02,889 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 8,12,855 ಹೊಸಬರು, 62,845 ರಿಪೀಟರ್ಸ್ ಹಾಗೂ 27,189 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
MUST READ : ನಾಳೆಯಿಂದ SSLC ಪರೀಕ್ಷೆ ಆರಂಭ – All The Best ಹೇಳಿದ CM..!!

ಭದ್ರತಾ ಕ್ರಮಗಳು ಕಠಿಣ
ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ಹಾಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಜಾರಿಯಲ್ಲಿರಲಿದೆ.

ಮುಖ್ಯ ಮಾರ್ಗಸೂಚಿಗಳು
- ಮೊಬೈಲ್, ಸ್ಮಾರ್ಟ್ ವಾಚ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ನಿಷೇಧ
- ಅನಧಿಕೃತ ಚಿತ್ರೀಕರಣಕ್ಕೆ ಸಂಪೂರ್ಣ ತಡೆ
- ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಮಾಹಿತಿ ರವಾನೆ ಮಾಡುವುದಕ್ಕೆ ನಿಷೇಧ
- ನಿಷೇಧಿತ ವಲಯದಲ್ಲಿ ಅಪಾಯಕಾರಿ ವಸ್ತುಗಳನ್ನು ಹೊಂದಲು ಅವಕಾಶ ಇಲ್ಲ
- ಪ್ರತಿಯೊಂದು ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯ

ವಿದ್ಯಾರ್ಥಿಗಳಿಗೆ ಸಲಹೆಗಳು
ವಿದ್ಯಾರ್ಥಿಗಳು ವದಂತಿಗಳನ್ನು ನಂಬದೆ ಶಾಂತಚಿತ್ತದಿಂದ ಪರೀಕ್ಷೆ ಬರೆಯಬೇಕು ಎಂದು ಇಲಾಖೆ ಸೂಚಿಸಿದೆ. ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಬ್ಲೂಪ್ರಿಂಟ್ ಆಧಾರದಲ್ಲಿ ಸಿದ್ಧರಾಗಿರುವವರಿಗೆ ಉತ್ತಮ ಫಲಿತಾಂಶಗಳ ಸಾಧ್ಯತೆ ಇದೆ.

ಶುಭ ಹಾರೈಸಿದ ನಾಯಕರು
SSLC ಪರೀಕ್ಷೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳಿಗೆ “ಆಲ್ ದಿ ಬೆಸ್ಟ್” ತಿಳಿಸಿದ್ದಾರೆ.
MUST WATCH : ರಾಜ್ಯದಲ್ಲಿ ಮಾ. 21ರ ವರೆಗೆ ಭಾರೀ ಮಳೆ – ಯಾವ ಯಾವ ಜಿಲ್ಲೆಗಳಿಗೆ ALERT




