Egg Price : ಕೋಳಿ ಮೊಟ್ಟೆ ದರ 7 ರಿಂದ 4 ರೂ.ವರೆಗೆ ಇಳಿಕೆ.

ಒಂದು ಕಡೆ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧ ಹದಿನಾಲ್ಕು ದಿನಗಳು ಕಳೆದ್ರೂ ಕೊನೆಗಾಣುತ್ತಿಲ್ಲ, ಇದ್ರಿಂದಾಗಿ ದೇಶದಾದ್ಯಂತ ಸಿಲಿಂಡರ್ ಪ್ರಾಬ್ಲಮ್ ಶುರುವಾಗಿತ್ತು. ಇದೀಗ ಇದರ ಬೆನ್ನಲ್ಲೇ ಯುದ್ದದ ಎಫೆಕ್ಟ್ ನಿಂದಾಗಿ ಮೊಟ್ಟೆಯ ವ್ಯಾಪಾರ ಹಾಗೂ ದರ ಎರಡು ಕುಸಿದಿದ್ದು ಮೊಟ್ಟೆ ವ್ಯಾಪಾರಿಗಳು ಪರದಾಡುವಂತಾಗಿದೆ.

ಮೊಟ್ಟೆಯ ದರ ಏಕಾಏಕಿ ಕುಸಿತ
ಯುದ್ದದ ಎಫೆಕ್ಟ್ ನಿಂದಾಗಿ ಒಂದು ಕಡೆ ವಾಣಿಜ್ಯ ಬಳಕೆಯ ಸಿಲಿಂಡರ್ಗಳು ಸಿಗದೆ ಹೋಟೆಲ್ ಉದ್ಯಮ ನೆಲಕಚ್ಚಿದ್ರೆ ಇತ್ತ ಮೊಟ್ಟೆ ವ್ಯಾಪಾರಕ್ಕೂ ಎಫೆಕ್ಟ್ ತಟ್ಟಿದ್ದು, ಮೊಟ್ಟೆಯ ದರ ಏಕಾಏಕಿ ಕುಸಿದಿದೆ. ಸಿಲಿಂಡರ್ ಸಿಗದ ಕಾರಣ ಹೋಟೆಲ್ನವರೂ ಮೊಟ್ಟೆ ತೆಗೆದುಕೊಳ್ಳುತ್ತಿಲ್ಲವಂತೆ. ಇನ್ನೊಂದು ಕಡೆ ಹೊರದೇಶಗಳಿಗೆ ಮೊಟ್ಟೆ ರಪ್ತು ಬಂದ್ ಆಗಿರೋದ್ರಿಂದ ಮೊಟ್ಟೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
READ THIS : ಸಿದ್ದಗಂಗಾ ಮಠಕ್ಕೆ ಪರಂ ವಿಸಿಟ್ – SSLC ಸ್ಟೂಡೆಂಟ್ಸ್ಗೆ ವಿಶ್
ಯುದ್ಧದ ಎಫೆಕ್ಟ್ ನಮ್ಮ ವ್ಯಾಪಾರದ ಮೇಲೂ ತಟ್ಟಿದೆ
ಇನ್ನು ಯುದ್ದದ ಎಫೆಕ್ಟ್ ಎಲ್ಲ ದೇಶಗಳಿಗೂ ತಟ್ಟಿದ್ದು, ನಮ್ಮ ದೇಶಕ್ಕೂ ತಟ್ಟಿದೆ. ಇದ್ರಿಂದ ಬೇರೆ ಕಡೆ ರಪ್ತಾಗುತ್ತಿದ್ದ ಮೊಟ್ಟೆ ಗಳು ಸಹ ಹೋಗ್ತಿಲ್ಲ. ಇನ್ನು ಕಮರ್ಷಿಯಲ್ ಸಿಲಿಂಡರ್ ಸಿಗದ ಕಾರಣ ಹೋಟೆಲ್ ಬಂದ್ ಆಗಿದ್ದು ಹೋಟೆಲ್ಗೆ ಹೋಗಬೇಕಿದ್ದ ಮೊಟ್ಟೆ ಸರಬರಾಜು ಆಗ್ತಿಲ್ಲ. ಅಲ್ದೇ ನಮ್ಮ ದೇಶದಿಂದ ಗಲ್ಪ್ ದೇಶಗಳಿಗೆ ಮೊಟ್ಟೆ ಸರಬರಾಜು ಆಗ್ತಿತ್ತು, ಇದೀಗ ಅದೂ ಕೂಡ ಆಗ್ತಿಲ್ಲ. ಆದ್ರಿಂದ ಮೊಟ್ಟೆ ಬೆಲೆ ಏಕಾಏಕಿ ಕುಸಿದಿದ್ದು, ಯುದ್ದದ ಎಫೆಕ್ಟ್ ನಮ್ಮ ವ್ಯಾಪಾರದ ಮೇಲೂ ಹಾಗೂ ರೈತರಿಗೂ ಕೂಡ ತಟ್ಟಿದೆ ಎಂದು ಮೊಟ್ಟೆ ವ್ಯಾಪಾರಿಗಳು ಅಭಿಪ್ರಾಯ ತಿಳಿಸಿದ್ರು.

ಮೊಟ್ಟೆ ದರ ಇಳಿಕೆ ಕಂಡು ಖುಷಿ
ಒಟ್ಟಿನಲ್ಲಿ, ದಿನೇ ದಿನೇ ಯುದ್ದದ ಎಫೆಕ್ಟ್ ಎಲ್ಲಾ ವ್ಯಾಪಾರಗಳ ಮೇಲೂ ತಟ್ಟುತ್ತಿದ್ದು. ಇದೀಗ Egg Price ಕುಸಿತದಿಂದ ವ್ಯಾಪಾರಿಗಳು ಕಂಗಾಲಾಗಿದ್ರೆ, ಇತ್ತ ಗ್ರಾಹಕರು ಮೊಟ್ಟೆ ದರ ಇಳಿಕೆ ಕಂಡು ಖುಷಿಯಾಗಿದ್ದಾರೆ.

MUST WATCH : ತಿಪಟೂರು ಕೆರೆಯಲ್ಲಿ ಹೂಳೆತ್ತುವ ಕಾರ್ಯ ಹೂಳೆತ್ತುವಾಗ ಸಿಕ್ಕಿದ್ದನ್ನು ಕಂಡು ಶಾಕ್




