Karwar ದಲ್ಲಿ ಕುಡಿದ ಮತ್ತಿನಲ್ಲಿ ಕಂಟೇನರ್ ಚಾಲಕ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸಾವನ್ನಪ್ಪಿದೆ…

ಉತ್ತರ ಕನ್ನಡ ಜಿಲ್ಲೆಯ Karwar ದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನ ಮೇಲೆ ಕಂಟೇನರ್ ಬಿದ್ದ ಪರಿಣಾಮ 8 ವರ್ಷದ ಮಗು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಈ ಘಟನೆ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಕಂಟೇನರ್ ಚಾಲಕ ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆ ವಾಹನ ಅಡ್ಡಗಟ್ಟಿ ಗಲಾಟೆ ಮಾಡುತ್ತಿದ್ದನು. ಬಳಿಕ ಸಿಟ್ಟಿನಿಂದ ಕಂಟೇನರ್ ಅನ್ನು ಚಲಾಯಿಸಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
MUST READ : Bangalore ನಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ತೇಜಸ್ವಿ ಸೂರ್ಯ ಮಧ್ಯ ಪ್ರವೇಶ..!

ಕಾರಿನ ಮೇಲೆ ಬಿದ್ದ ಕಂಟೇನರ್
ಡಿಕ್ಕಿಯ ಪರಿಣಾಮ ಕಂಟೇನರ್ ಮಹಾರಾಷ್ಟ್ರ ಪಾಸಿಂಗ್ ಕಾರಿನ ಮೇಲೆ ಬಿದ್ದಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ 8 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಇನ್ನೂ ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಗೆ ಸಂಬಂಧಿಸಿ ಕಾರವಾರ ಪೊಲೀಸರು ಕಂಟೇನರ್ ಚಾಲಕನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಮತ್ತೆ ಕುಡಿದು ವಾಹನ ಚಲಾಯಿಸುವ ಅಪಾಯವನ್ನು ಎತ್ತಿ ತೋರಿಸಿದ್ದು, ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಅಗತ್ಯವಿದೆ ಎಂಬುದನ್ನು ನೆನಪಿಸಿದೆ.
MUST WATCH : ನಿಮ್ಮ ಮನೆ ಸುರಕ್ಷಿತವಾಗಿ ಇರ್ಬೇಕಾ..?- ದೀರ್ಘಕಾಲಿಕ ಬಾಳಿಕೆಗೆ SUNVIK TMT , BARS & BRICKS ಬಳಸಿ




