Bagalkote ಜಿಲ್ಲೆಯ ತೇರದಾಳದಲ್ಲಿ ಗೆಳತಿಗಾಗಿ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ…

Bagalkote ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದ ಭೀಕರ ಘಟನೆಯಲ್ಲಿ ಗೆಳತಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನೆ ತೇರದಾಳ ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಸಮೀಪ ನಡೆದಿದೆ. ಜಗಳದ ವೇಳೆ ಚಾಕು ಇರಿತಕ್ಕೊಳಗಾಗಿ 19 ವರ್ಷದ ರಾಹುಲ್ ಸಪ್ತಸಾಗರ್ ಮೃತಪಟ್ಟಿದ್ದಾರೆ.
MUST READ : Bangalore ನಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ತೇಜಸ್ವಿ ಸೂರ್ಯ ಮಧ್ಯ ಪ್ರವೇಶ..!

ಸ್ನೇಹಿತನೇ ಆರೋಪಿ
ಮೃತ ರಾಹುಲ್ ಸಪ್ತಸಾಗರ್ ತೇರದಾಳ ಪಟ್ಟಣದ ಅರಳಿಕಟ್ಟಿ ಗಲ್ಲಿಯ ನಿವಾಸಿಯಾಗಿದ್ದು, ಡಿಪ್ಲೊಮಾ 2ನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಈ ಪ್ರಕರಣದಲ್ಲಿ ರಾಹುಲ್ ಸ್ನೇಹಿತ ಶ್ರೇಯಸ್ ಚಾಕು ಇರಿದ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ಇಬ್ಬರು ಯುವಕರು ಒಬ್ಬಳ ವಿಚಾರಕ್ಕೆ ಜಗಳ ನಡೆಸಿದ್ದು, ಆ ಜಗಳ ಗಂಭೀರವಾಗಿ ತಿರುಗಿ ಚಾಕು ಇರಿತದವರೆಗೆ ಹೋಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ತೇರದಾಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
MUST WATCH : ನಿಮ್ಮ ಮನೆ ಸುರಕ್ಷಿತವಾಗಿ ಇರ್ಬೇಕಾ..?- ದೀರ್ಘಕಾಲಿಕ ಬಾಳಿಕೆಗೆ SUNVIK TMT , BARS & BRICKS ಬಳಸಿ

