Nelamangala : ನೈಟ್ ಜಾಲಿ ರೈಡ್ಗೆ ತೆರಳಿದ್ದಾಗ ಭೀಕರ ಅಪಘಾತ – ಇಬ್ಬರು ಯುವಕರು ಬಲಿ.

ಬೆಂಗಳೂರು ನಗರದಿಂದ ಕುಣಿಗಲ್ ಕಡೆಗೆ ಜಾಲಿ ರೈಡ್ಗೆ ತೆರಳುತ್ತಿದ್ದ ವೇಳೆ ಬೈಕ್ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಡಿಗ್ರಿ ಅಂತಿಮ ವರ್ಷದ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನು ಈ ಘಟನೆ Nelamangala ತಾಲ್ಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಸಮೀಪ ನಡೆದಿದೆ.
ನೈಟ್ ಜಾಲಿ ರೈಡ್ಗೆ ತೆರಳಿದ್ದಾಗ ಭೀಕರ ಅಪಘಾತ
ಮೃತ ಯುವಕರನ್ನು 22 ವರ್ಷದಚಂದನ್ ಮತ್ತುಮಹೇಶ್ ಎಂದು ಗುರುತಿಸಲಾಗಿದೆ. ಇಬ್ಬರೂ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿಗಳಾಗಿದ್ದು, ಹೊಸ ಬೈಕ್ನಲ್ಲಿ ಬೆಂಗಳೂರಿನಿಂದ ಕುಣಿಗಲ್ ಕಡೆಗೆ ಜಾಲಿ ರೈಡ್ ಹೋದಾಗ ಘಟನೆ ನಡೆದಿದೆ.
READ THIS : ಪ್ರೀತಿಸಿ ಮದುವೆಯಾದ ಗಂಡನಿಂದಲೇ ಹೆಂಡತಿ ಹತ್ಯೆ?

ಚಿಕಿತ್ಸೆ ಫಲಕಾರಿಯಾಗದೇ ಸಾವು
ಬೈಕ್ ಚಲಾಯಿಸುತ್ತಿದ್ದ ಚಂದನ್ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಮಹೇಶ್ರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅವರು ಅಸುನೀಗಿದ್ದಾರೆ.
ಹೆಲ್ಮೆಟ್ ಕೈನಲ್ಲಿದ್ದರು ತಲೆಗೆ ಧರಿಸಿಕೊಳ್ಳದೇ ಬೇಜಾವಾಬ್ದಾರಿ
ಹೆಲ್ಮೆಟ್ ಕೈನಲ್ಲಿದ್ದರು ತಲೆಗೆ ಧರಿಸಿಕೊಳ್ಳದೇ ಬೇಜಾವಾಬ್ದಾರಿಯಿಂದ ವಿದ್ಯಾರ್ಥಿಗಳು ಬೈಕ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದ್ದು, ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MUST WATCH : ಪ್ರದೀಪ್ ಈಶ್ವರ್ ಶಿಕ್ಷಣ ಸಚಿವರಾಗ್ಬೇಕು ವಿದ್ಯಾರ್ಥಿನಿಯ ಮಾತಿಗೆ ಶಾಸಕರು ಏನಂದ್ರು.?





