Nelamangala ದ ಮಾದನಾಯಕನಹಳ್ಳಿ ಸಮೀಪದ ಅರೆಕೆತ್ತನಹಳ್ಳಿಯಲ್ಲಿ ಹೃದಯಾಘಾತದಿಂದ 30 ವರ್ಷದ ನವವಿವಾಹಿತ ಚರಣ್ ಮೃತಪಟ್ಟಿದ್ದಾರೆ…

ಬೆಂಗಳೂರು ಗ್ರಾಮಾಂತರ ಜಿಲ್ಲೆಯ Nelamangala ತಾಲೂಕಿನ ಮಾದನಾಯಕನಹಳ್ಳಿ ಸಮೀಪದ ಅರೆಕೆತ್ತನಹಳ್ಳಿ ಗ್ರಾಮದಲ್ಲಿ ಹೃದಯಾಘಾತದಿಂದ ನವವಿವಾಹಿತ ಯುವಕ ಮೃತಪಟ್ಟ ಘಟನೆ ನಡೆದಿದೆ.
ಹೃದಯಾಘಾತದಿಂದ ಮೃತಪಟ್ಟ ಯುವಕನನ್ನು ಚರಣ್ (30) ಎಂದು ಗುರುತಿಸಲಾಗಿದೆ. ಮೂರು ತಿಂಗಳ ಹಿಂದಷ್ಟೇ ಚರಣ್ ಅವರ ಮದುವೆ ನಡೆದಿತ್ತು ಎನ್ನಲಾಗಿದೆ.
READ THIS : ದಾಖಲೆಯ 17ನೇ ಬಜೆಟ್ ಮಂಡಿಸಲಿರುವ Siddaramaiah – ನಿರೀಕ್ಷೆಗಳೇನು?

ಉಸಿರಾಟದ ತೊಂದರೆಯಿಂದ ಕುಸಿತ
ಮಾಹಿತಿಯ ಪ್ರಕಾರ, ಇಂದು ಬೆಳಗ್ಗೆ ಮನೆಯಲ್ಲಿದ್ದ ವೇಳೆ ಚರಣ್ ಅವರಿಗೆ ಹಠಾತ್ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಅವರು ಮನೆಯಲ್ಲೇ ಕುಸಿದು ಬಿದ್ದಿದ್ದಾರೆ.
ಆಸ್ಪತ್ರೆಗೆ ಕರೆದೊಯ್ದರೂ ಫಲಿಸಿಲ್ಲ
ತಕ್ಷಣವೇ ಕುಟುಂಬದವರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ ವೈದ್ಯರು ಪರೀಕ್ಷಿಸಿದಾಗ ಅವರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಪರಿಣಾಮವಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಶವಗಾರಕ್ಕೆ ರವಾನೆ ಮಾಡಲಾಗಿದೆ. ಈ ಘಟನೆ ಕುಟುಂಬಸ್ಥರಲ್ಲಿ ದುಃಖದ ವಾತಾವರಣವನ್ನುಂಟುಮಾಡಿದೆ.
MUST WATCH : ಕೊಂಡೋತ್ಸವದ ವೇಳೆ ಪವಾಡ..! ದೇವರ ಪವಾಡಕ್ಕೆ ಭಕ್ತರು ಬೆರಗು..! |




