T20 ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ vs ಇಂಗ್ಲೆಂಡ್ ಮೂರನೇ ಬಾರಿ ಮುಖಾಮುಖಿ. ಕುಲದೀಪ್ ಯಾದವ್ ಎಂಟ್ರಿ ಸಾಧ್ಯತೆ, ಪ್ಲೇಯಿಂಗ್ ಇಲೆವೆನ್ ಬದಲಾವಣೆ ಚರ್ಚೆ…

ವಿಶ್ವ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈಗ ಭಾರತ ಮತ್ತು England ನಡುವಿನ T20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ಮೇಲೆ ನೆಟ್ಟಿದೆ.
ಸತತ ಮೂರನೇ ಆವೃತ್ತಿಯಲ್ಲಿ ಸೆಮಿಸ್ ಹಂತದಲ್ಲಿ ಇದೇ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಕುತೂಹಲ ಹೆಚ್ಚಿಸಿದೆ.
ಇಂದು Eden Gardens ಮೈದಾನದಲ್ಲಿ ನಡೆಯುವ ಮೊದಲ ಸೆಮಿಫೈನಲ್ನಲ್ಲಿ South Africa ಮತ್ತು New Zealand ತಂಡಗಳು ಸೆಣಸಲಿವೆ. ಈ ಪಂದ್ಯವೂ ಕ್ರಿಕೆಟ್ ಪ್ರೇಮಿಗಳಿಗೆ ರೋಚಕ ಕ್ಷಣಗಳನ್ನು ನೀಡುವ ನಿರೀಕ್ಷೆ ಇದೆ.

ಟೀಮ್ ಇಂಡಿಯಾದಿಂದ ಬಿಗ್ ಅಪ್ಡೇಟ್
ಮಾರ್ಚ್ 5ರಂದು ನಡೆಯಲಿರುವ ಮಹತ್ವದ ಕದನಕ್ಕೆ ಮುನ್ನ ಟೀಮ್ ಇಂಡಿಯಾ ಪಾಳಯದಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ಆಂಗ್ಲರ ಬ್ಯಾಟಿಂಗ್ ದಂಡೆಯನ್ನು ಕಟ್ಟಿಹಾಕಲು ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಸರ್ಪ್ರೈಸ್ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದೆ.
READ THIS : ರಣವೀರ್ ನಟನೆಯ ‘Dhurandhar 2’ ವಿಳಂಬಕ್ಕೆ ಕಾರಣವಾಯ್ತು ಚಂದ್ರ ಗ್ರಹಣ

ಮೂಲಗಳ ಪ್ರಕಾರ, ಮಿಸ್ಟರಿ ಸ್ಪಿನ್ನರ್ Varun Chakravarthy ಬದಲಿಗೆ ಅನುಭವಿ ಚೈನಾಮನ್ ಬೌಲರ್ Kuldeep Yadav ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸುವ ಸಾಧ್ಯತೆ ಹೆಚ್ಚಾಗಿದೆ.

ಇತಿಹಾಸದ ಪ್ರಕಾರ, ಇಂಗ್ಲೆಂಡ್ ಬ್ಯಾಟರ್ಗಳು ವೇಗದ ಬೌಲಿಂಗ್ಗಿಂತ ಸ್ಪಿನ್ ಎದುರಿಸಲು ಹೆಚ್ಚು ತಿಣುಕಾಡಿದ್ದಾರೆ. ವಿಶೇಷವಾಗಿ ಕುಲದೀಪ್ ಅವರ ಗೂಗ್ಲಿ ಮತ್ತು ಲೂಪ್ ಎಸೆತಗಳು ನಾಯಕ Harry Brook ಹಾಗೂ Jos Buttler ಮುಂತಾದ ಆಟಗಾರರಿಗೆ ಕಂಟಕವಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

3 ಆವೃತ್ತಿಗಳಲ್ಲಿ ಆಂಗ್ಲರೇ ಎದುರಾಳಿ
- 2022: ಇಂಗ್ಲೆಂಡ್ ಭಾರತವನ್ನು 10 ವಿಕೆಟ್ಗಳಿಂದ ಸೋಲಿಸಿತು.
- 2024: ಭಾರತ ಸೆಮಿಸ್ನಲ್ಲಿ ಇಂಗ್ಲೆಂಡ್ನ್ನು ಸೋಲಿಸಿ, ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಟ್ರೋಫಿ ಗೆದ್ದಿತು.
- 2026: ಮೂರನೇ ಬಾರಿ ಸೆಮಿಸ್ನಲ್ಲಿ ಮುಖಾಮುಖಿ – ನಿರೀಕ್ಷೆ ಗರಿಗೆದರಿದೆ.
ಹೀಗಾಗಿ ಈ ಬಾರಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
MUST WATCH : TUMAKURU|ಕುಡಿದ ಮತ್ತಲ್ಲಿ ಸ್ನೇಹಿತನ ಮೇಲೆ ಅಟ್ಯಾಕ್ – ಸ್ಥಳದಿಂದ ಪ್ರಜಾಶಕ್ತಿ ಟಿವಿ ಪ್ರತ್ಯಕ್ಷ




