Bengaluru ವೈಟ್ಫೀಲ್ಡ್ನಲ್ಲಿ ನೀರಿನ ಸಂಪ್ ಸ್ವಚ್ಛಗೊಳಿಸಲು ಇಳಿದ ಮನೆ ಮಾಲೀಕ ಸೇರಿ ಮೂವರು ವಿಷಕಾರಿ ಅನಿಲದಿಂದ ಸಾವನ್ನಪ್ಪಿದರೆ.

Bengaluru ನಗರದ ವೈಟ್ಫೀಲ್ಡ್ ಪ್ರದೇಶದಲ್ಲಿ ನೀರಿನ ಸಂಪ್ ಸ್ವಚ್ಛಗೊಳಿಸಲು ಇಳಿದ ಮೂವರು ದುರ್ಮರಣ ಹೊಂದಿದ ದುರ್ಘಟನೆ ನಡೆದಿದೆ. ವಿಷಕಾರಿ ಅನಿಲದ ಪರಿಣಾಮ ಉಸಿರಾಟದ ತೊಂದರೆ ಉಂಟಾಗಿ ಈ ದುರಂತ ಸಂಭವಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ಘಟನೆ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇವಸ್ಥಾನದ ವೃತ್ತದ ಬಳಿ ನಡೆದಿದೆ. ಮನೆ ಮಾಲೀಕ ಮುನಿಶಾಮಪ್ಪ ಮೊದಲಾಗಿ ನೀರಿನ ಸಂಪಿನೊಳಗೆ ಇಳಿದಿದ್ದರು. ಸಂಪ್ ಸ್ವಚ್ಛಗೊಳಿಸಲು ಬಳಸಿದ ರಾಸಾಯನಿಕದಿಂದ ವಿಷಕಾರಿ ಅನಿಲ ಉಂಟಾಗಿ ಅವರಿಗೆ ಉಸಿರಾಟದ ತೊಂದರೆ ಎದುರಾಯಿತು.
ಇದನ್ನು ಓದಿ : ಪಾಕಿಸ್ತಾನದ ಶೋಯೆಬ್ ಮಲಿಕ್ ದಾಖಲೆ ಮುರಿದ Pandya
ರಕ್ಷಿಸಲು ಹೋಗಿ ಇಬ್ಬರೂ ಬಲಿ
ಮಾಲೀಕನನ್ನು ರಕ್ಷಿಸಲು ಪ್ಲಂಬರ್ ರುದ್ರಕುಮಾರ್ (40) ಸಂಪಿನೊಳಗೆ ಇಳಿದಿದ್ದು, ಅವರು ಕೂಡ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ನಂತರ ಪರಿಸ್ಥಿತಿ ತಿಳಿದು ನೋಡಲು ತೆರಳಿದ ವಿಶ್ವನಾಥ್ (24) ಕೂಡ ವಿಷಕಾರಿ ಅನಿಲದ ಪರಿಣಾಮ ಜೀವ ಕಳೆದುಕೊಂಡಿದ್ದಾರೆ. ವಿಶ್ವನಾಥ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ನಂತರ ಅರವಿಂದ್ ಎಂಬವರು ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೂವರನ್ನೂ ತಕ್ಷಣ ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಆದರೆ ಮಾರ್ಗ ಮಧ್ಯೆಯೇ ಮೂವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಸ್ಥಳ ಪರಿಶೀಲನೆ – ಪೊಲೀಸ್ ತನಿಖೆ ಆರಂಭ
ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಘಟನೆಗೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಇದನ್ನು ನೋಡಿ : DKS | ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಡಿ.ಕೆ ಶಿವಕುಮಾರ್ ಏನಂದ್ರು ಗೊತ್ತಾ?




