ನಟಿ Rashmika ಮತ್ತು ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಾಳೆ ನಡೆಯಲಿರುವ ಮದುವೆ ಮತ್ತು ಮಾರ್ಚ್ 4ರಂದು ನಡೆಯಲಿರುವ ರಿಸೆಪ್ಷನ್ಗೆ ಕನ್ನಡದ ಕೆಲವು ಸ್ಟಾರ್ಗಳಿಗೆ ಮಾತ್ರ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ಹಾಗಾದ್ರೆ ಯಾರಿಗೆಲ್ಲಾ ಲಗ್ನ ಪತ್ರಿಕೆ ಸನೀಡಿದ್ದಾರೆ?
ರಶ್ಮಿಕಾ ಸ್ವತಃ ವೈಯಕ್ತಿಕವಾಗಿ ಮೆಸೇಜ್ ಮಾಡಿ ಆಮಂತ್ರಣ ನೀಡಿರುವುದು ವಿಶೇಷವಾಗಿದೆ. ಸ್ಯಾಂಡಲ್ವುಡ್ ಬಹುಬೇಡಿಕೆ ನಟರಿಗೆ ಮಾತ್ರ ಮದುವೆ ಆಹ್ವಾನ ಪತ್ರಿಕೆ ನೀಡಲಾಗಿದೆ.
ಕನ್ನಡ ನಟರಿಗೂ ರಶ್ಮಿಕಾ ಮದುವೆ ಆಹ್ವಾನ ಪತ್ರಿಕೆ!
ನಾಳೆ ನಡೆಯುವ ಮದುವೆ ಹಾಗೂ ಮಾರ್ಚ್ 4ಕ್ಕೆ ಹೈದರಾಬಾದ್ ನಲ್ಲಿ ನಡೆಯುವ ರಿಸೆಪ್ಷನ್ ಗೆ ಅಂತೂ ಇಂತೂ ಕರ್ನಾಟಕದ ಸ್ಟಾರ್ಗಗಳಿಗೆ ಲಗ್ನ ಪತ್ರಿಕೆ ನೀಡಿ ಪ್ರೀತಿಯಿಂದ ಆಹ್ವಾನಿಸಲಾಗಿದೆ. ಸುಮಾರು 11 ಜನರಿಗೆ ಆರಕ್ಷತೆಯ ಆಮತ್ರಂಣ ಪತ್ರಿಕೆಯನ್ನು Rashmika ತಲುಪಿಸಿದ್ದಾರೆ.
ಇದನ್ನು ಓದಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

ಆಹ್ವಾನ ಪತ್ರಿಕೆ ತಲುಪಿದ ಕನ್ನಡ ಸ್ಟಾರ್ಗಳ ಪಟ್ಟಿ!
ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ಪುನೀತ್ ರಾಜ್ ಕುಮಾರ್ ಫ್ಯಾಮಿಲಿ, ರವಿಚಂದ್ರನ್, ಧ್ರುವ ಸರ್ಜಾ, ಗಣೇಶ್, ನಿರ್ದೆಶಕ ಎಂ.ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ, ಆಶಿಕಾ ರಂಗಾನಥ್ಗೆ ಮಾತ್ರ ಆಹ್ವಾನ ಪತ್ರಿಕೆ ನೀಡಲಾಗಿದೆ.
ಶೆಟ್ರ ಬಳಗ ಮರೆತ್ರಾ ರಶ್ಮಿಕಾ ಮಂದಣ್ಣ?
ರಶ್ಮಿಕಾಗೆ ಮೊದಲ ಅವಕಾಶ ಕೊಟ್ಟ ಶೆಟ್ರ ಬಳಗ ಅಥವಾ ಆ ತಂಡದ ಮುಖ್ಯಸ್ಥರು ಈ ಪಟ್ಟಿಯಲ್ಲಿ ಇಲ್ಲ. ರಶ್ಮಿಕಾ ಮೊದಲು ‘ಕಿರಿಕ್ ಪಾರ್ಟಿ’ಯಲ್ಲಿ ನಟಿಸಿದ್ದು, ಆ ಚಿತ್ರದಲ್ಲಿ ಶೆಟ್ರು ತಂಡದವರು ದೊಡ್ಡ ಪಾತ್ರ ವಹಿಸಿದ್ದರು. ಆದರೆ ಈಗ ರಶ್ಮಿಕಾ ದೊಡ್ಡ ಸ್ಟಾರ್ ಆಗಿರುವಾಗ ಅವರಿಗೆ ಆಹ್ವಾನ ತಲುಪಿಸದಿದ್ದುದು ಗಮನಾರ್ಹವಾಗಿದೆ.
ಇದನ್ನು ನೋಡಿ : GUBBI|ಕ್ಯಾನ್ಸರ್ ಪೀಡಿತ ಬಾಲಕಿಯ ನೆರವಿಗೆ ನಿಂತ ಪ್ರಜಾಶಕ್ತಿ ಟಿವಿ- ಅಧಿಕಾರಿಗಳನ್ನೇ ತಿರುಗಿನೋಡುವಂತೆ ಮಾಡಿತು





