Lunar Eclipse : 2026ರ ಮೊದಲ ಚಂದ್ರಗ್ರಹಣ ಮಾರ್ಚ್ 03ರಂದು ಫಾಲ್ಗುಣ ಹುಣ್ಣಿಮೆಯಂದು ಸಂಭವಿಸಲಿದೆ. ಭಾರತದಲ್ಲಿ ಗ್ರಹಣ ಯಾವ ಸಮಯದಲ್ಲಿ ಕಾಣಿಸಲಿದೆ?

Lunar Eclipse : 2026ರಲ್ಲಿ ವರ್ಷದ ಮೊದಲ ಚಂದ್ರಗ್ರಹಣ ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸುತ್ತಿದ್ದು, ಖಗೋಳಾಸಕ್ತರು ಹಾಗೂ ಭಕ್ತರಲ್ಲಿ ಕುತೂಹಲ ಮೂಡಿಸಿದೆ. ಕೆಲವೇ ದಿನಗಳ ಹಿಂದೆ ಸೂರ್ಯಗ್ರಹಣ ನಡೆದಿದ್ದರೆ, ಇದೀಗ ಮತ್ತೊಂದು ಮಹತ್ವದ ಆಕಾಶಘಟನೆ ನಡೆಯಲಿರುವುದು ವಿಶೇಷವಾಗಿದೆ.
ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ?
ಈ ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್ 03ರಂದು ಸಂಭವಿಸಲಿದೆ. ಫಾಲ್ಗುಣ ಹುಣ್ಣಿಮೆ ದಿನವೇ ಈ ಗ್ರಹಣ ಸಂಭವಿಸುವುದರಿಂದ ಧಾರ್ಮಿಕ ಹಾಗೂ ಜ್ಯೋತಿಷ್ಯ ಮಹತ್ವ ಹೆಚ್ಚಾಗಿದೆ.
ಗ್ರಹಣ ಸಮಯ (ಭಾರತೀಯ ಕಾಲಮಾನ)
- ಗ್ರಹಣ ಆರಂಭ: ಮಧ್ಯಾಹ್ನ 3:20
- ಸಂಪೂರ್ಣ ಚಂದ್ರಗ್ರಹಣ ಆರಂಭ: ಸಂಜೆ 4:34
- ಗ್ರಹಣ ಅಂತ್ಯ: ಸಂಜೆ 6:47
ಒಟ್ಟು ಗ್ರಹಣದ ಅವಧಿ ಸುಮಾರು 3 ಗಂಟೆ 27 ನಿಮಿಷಗಳಾಗಿರುತ್ತದೆ.
ಇದನ್ನು ಓದಿ : ಮಾಜಿ ಶಾಸಕ Suresh Gowdaರ ಕಾರು ಅಪಘಾತ – ಮದುವೆಗೆ ತೆರಳುತ್ತಿದ್ದಾಗ ಪಲ್ಟಿಯಾದ ಕಾರು

ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆಯೇ?
ಈ ಚಂದ್ರಗ್ರಹಣವು ಭಾರತದಲ್ಲೂ ಗೋಚರಿಸಲಿದೆ. ಆದರೆ ಚಂದ್ರೋದಯ ಸಮಯದ ಕಾರಣದಿಂದಾಗಿ ಬಹಳ ಕಡಿಮೆ ಅವಧಿಗೆ ಮಾತ್ರ ಕಾಣಿಸಿಕೊಳ್ಳಲಿದೆ.
ಭಾರತದಲ್ಲಿ ಚಂದ್ರೋದಯ ಸಂಜೆ 6:22ರ ಸುಮಾರಿಗೆ ಸಂಭವಿಸುತ್ತದೆ. ಗ್ರಹಣವು ಸಂಜೆ 6:47ಕ್ಕೆ ಕೊನೆಗೊಳ್ಳುವುದರಿಂದ ಸುಮಾರು 25 ನಿಮಿಷಗಳ ಕಾಲ ಮಾತ್ರ ಗ್ರಹಣ ವೀಕ್ಷಿಸಲು ಸಾಧ್ಯವಾಗುತ್ತದೆ.
ಆದಾಗ್ಯೂ, ವಿವಿಧ ರಾಜ್ಯಗಳಲ್ಲಿ ಚಂದ್ರೋದಯ ಸಮಯ ಬದಲಾಗುವ ಕಾರಣ ಗ್ರಹಣದ ಗೋಚರಿಸುವ ಅವಧಿಯೂ ಸ್ಥಳಾನುಸಾರ ಬದಲಾಗಬಹುದು.

ಯಾವ ರಾಶಿ ಮತ್ತು ನಕ್ಷತ್ರದಲ್ಲಿ ಗ್ರಹಣ?
ಗ್ರಹಣದ ದಿನ ಚಂದ್ರನು ಸಿಂಹ ರಾಶಿಯಲ್ಲಿ ಸಂಚರಿಸುತ್ತಾನೆ. ಇದರ ಪರಿಣಾಮವಾಗಿ ಚಂದ್ರಗ್ರಹಣವು ಸಿಂಹ ರಾಶಿ ಹಾಗೂ ಪೂರ್ವ ಫಾಲ್ಗುಣಿ ನಕ್ಷತ್ರದಲ್ಲಿ ಸಂಭವಿಸುತ್ತದೆ ಎಂದು ಜ್ಯೋತಿಷ್ಯರು ತಿಳಿಸಿದ್ದಾರೆ.
ಸೂತಕ ಅವಧಿ ಭಾರತದಲ್ಲೂ ಅನ್ವಯ
ಗ್ರಹಣ ಭಾರತದಲ್ಲಿ ಗೋಚರಿಸುವುದರಿಂದ ಸೂತಕ ಅವಧಿಯೂ ಅನ್ವಯವಾಗುತ್ತದೆ ಎಂದು ಧಾರ್ಮಿಕ ಪಂಡಿತರು ಹೇಳುತ್ತಾರೆ. ಈ ಅವಧಿಯಲ್ಲಿ ದೇವಸ್ಥಾನಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸಲಾಗುತ್ತದೆ.
ಇದನ್ನು ನೋಡಿ : POLICE ಕಾಟಕ್ಕೆ ವಿಧವೆ ಸೂಸೈ ಅಪ್ಪ ಅಮ್ಮನನ್ನು ಕಳೆದು ಕೊಂಡ ಮಕ್ಕಳು




