ಉತ್ತರ ಪ್ರದೇಶದ ಉನ್ನಾವೊದಲ್ಲಿ Cricket ಪಂದ್ಯದ ವೇಳೆ ಜೇನುಗಳ ದಾಳಿಗೆ ಅನುಭವಿ ಅಂಪೈರ್ ಮಾಣಿಕ್ ಗುಪ್ತಾ ಮೃತಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ
Cricket ಪಂದ್ಯ ನಡೆಯುತ್ತಿದ್ದ ವೇಳೆ ಜೇನುಗಳ ದಾಳಿಯಿಂದ ಅನುಭವಿ ಕ್ರಿಕೆಟ್ ಅಂಪೈರ್ ಸಾವನ್ನಪ್ಪಿದ ದುರ್ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕ್ರೀಡಾಂಗಣದಲ್ಲಿ ನಡೆದ ಈ ಘಟನೆ ಕ್ರಿಕೆಟ್ ವಲಯದಲ್ಲಿ ದುಃಖದ ವಾತಾವರಣವನ್ನುಂಟು ಮಾಡಿದೆ.
ಉತ್ತರ ಪ್ರದೇಶ (Uttar Pradesh) ರಾಜ್ಯದ ಉನ್ನಾವೊ ಜಿಲ್ಲೆಯ ಸಪ್ರು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಅನುಭವಿ ಅಂಪೈರ್ ಮಾಣಿಕ್ ಗುಪ್ತಾ ಜೇನುಗಳ ದಾಳಿಗೆ ಒಳಗಾಗಿ ಮೃತಪಟ್ಟಿದ್ದಾರೆ.
ಪಾನೀಯ ವಿರಾಮದ ವೇಳೆ ಜೇನುಗಳ ದಾಳಿ
ಮಾಹಿತಿಯ ಪ್ರಕಾರ, ಪಂದ್ಯ ಮುಗಿದ ಬಳಿಕ ಪಾನೀಯ ವಿರಾಮದ ಸಮಯದಲ್ಲಿ ಮಾಣಿಕ್ ಗುಪ್ತಾ ಸಹ ಅಂಪೈರ್ ಅವರನ್ನು ಭೇಟಿ ಮಾಡಲು ತೆರಳಿದ್ದರು.
ಇದೇ ವೇಳೆ ಅಚಾನಕ್ ಜೇನುಗಳ ಹಿಂಡು ಅಲ್ಲಿದ್ದವರ ಮೇಲೆ ದಾಳಿ ಮಾಡಿತು. ತಪ್ಪಿಸಿಕೊಳ್ಳಲು ಯತ್ನಿಸುವಾಗ ಅವರು ಆಯತಪ್ಪಿ ಬಿದ್ದಿದ್ದು, ಜೇನುಗಳು ಮುತ್ತಿಕೊಂಡು ಹಲವೆಡೆ ಕಚ್ಚಿವೆ.
ಇದನ್ನು ಓದಿ : `Toxic’ ನ ರಣರೋಚಕ ಟೀಸರ್ ರಿಲೀಸ್ – ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್
30 ವರ್ಷಗಳ ಅಂಪೈರಿಂಗ್ ಅನುಭವ
ಮಾಣಿಕ್ ಗುಪ್ತಾ ಸುಮಾರು ಮೂರು ದಶಕಗಳ ಕಾಲ ಕ್ರಿಕೆಟ್ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ಕಾನ್ಪುರ ಕ್ರಿಕೆಟ್ ವಲಯದಲ್ಲಿ ಗೌರವಾನ್ವಿತ ಅಂಪೈರ್ ಆಗಿದ್ದು, ರಾಜ್ಯ ಮಟ್ಟದ ಅಂಪೈರಿಂಗ್ ಸಮಿತಿಯ ಸದಸ್ಯರಾಗಿದ್ದರು.
ಜೊತೆಗೆ ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ಜೊತೆ ಸಹ ಸಂಬಂಧ ಹೊಂದಿದ್ದರು.
ಕ್ರಿಕೆಟ್ಗೆ ಜೀವನ ಸಮರ್ಪಿಸಿದ ವ್ಯಕ್ತಿ
ಮಾಣಿಕ್ ಗುಪ್ತಾ ಅವರ ನೆರೆಯವರಾದ ಭರತೇಂದು ಪುರಿ, ಅವರು ತಮ್ಮ ಇಡೀ ಜೀವನವನ್ನು ಕುಟುಂಬ ಹಾಗೂ ಕ್ರಿಕೆಟ್ಗೆ ಸಮರ್ಪಿಸಿದ್ದರು ಎಂದು ಸ್ಮರಿಸಿದ್ದಾರೆ.
ಕಾನ್ಪುರದಲ್ಲಿ ವಿಶಿಷ್ಟ ಅಂಪೈರ್ ಆಗಿ ಅವರು ಹೆಸರು ಗಳಿಸಿದ್ದರು ಎಂದು ತಿಳಿಸಿದ್ದಾರೆ.
ಈ ದುರಂತ ಘಟನೆ ಕ್ರಿಕೆಟ್ ಸಮುದಾಯದಲ್ಲಿ ಆಘಾತ ಮೂಡಿಸಿದ್ದು, ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆಗಳು ಎದ್ದಿವೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದನ್ನು ನೋಡಿ : ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಪರದಾಟ- ಸೇವೆ ಸಿಗದೇ ಕಂಗಾಲಾದ್ರು




