ಆಸ್ತಿಗಾಗಿ ದಾಯಾದಿಗಳಿಂದಲೇ ಸಾರಿಗೆ ನೌಕರನ Murder..! – ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಕಿರಾತಕರು.

Hassan Murder : ಇತ್ತೀಚಿನ ದಿನಗಳಲ್ಲಿ ಹಣ, ಆಸ್ತಿಗಾಗಿ ಸ್ವಂತದವರು ಅಂತಾನೂ ನೋಡದೇ ಹಲ್ಲೆ, ಹತ್ಯೆಗಳಂತಹ ಪ್ರಕರಣಗಳು ನಡೆಯುತ್ತಿವೆ. ಇದೀಗ ಅಂತಹದ್ದೇ ಭಯಾನಕ ಘಟನೆ Hassan ನಗರದಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕಾಗಿ ದಾಯಾದಿಗಳೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಈ ಘೋರ ದುರಂತ ನಡೆದಿರೋದು ಹಾಸನ ಜಿಲ್ಲೆಯ ಆಲೂರು ತಾಲೂಕಿನ ರಾಜನಹಳ್ಳಿಯಲ್ಲಿ.

ಇದನ್ನು ಓದಿ : CJ Roy Case|ಸಿಜೆ ರಾಯ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಸಾರಿಗೆ ನೌಕರನ ಭೀಕರ ಹತ್ಯೆ!
ಈ ಫೋಟೋದಲ್ಲಿ ಕಾಣಿಸ್ತಾ ಇರೋ ವ್ಯಕ್ತಿಯ ಹೆಸರು ವೀರಪ್ಪ ಅಂತಾ ಹಾಸನ KSRTC ಡಿಪೋದಲ್ಲಿ ಸಾರಿಗೆ ನೌಕರರಾಗಿದ್ದರು. ಕೆಲ ವರ್ಷಗಳ ಹಿಂದೆ ವೀರಪ್ಪನ ಚಿಕ್ಕಪ್ಪ ಬಾಗಲಯ್ಯ ತನ್ನ 2 ಎಕರೆ ಆಸ್ತಿಯನ್ನು ಅವರಿಗೆ ಕೊಡುವುದಾಗಿ ದಾನಪತ್ರ ನೀಡಿದ್ದರು. ಚಿಕ್ಕಪ್ಪನ ನಿಧನದ ಬಳಿಕ ಆ ಆಸ್ತಿ ವೀರಪ್ಪನ ಹೆಸರಿಗೆ ರಿಜಿಸ್ಟರ್ ಆಗಿತ್ತು. ಆದರೆ ಆತನ ಮಕ್ಕಳಾದ ಮಲ್ಲಮ್ಮ ಹಾಗೂ ಮಹದೇವಮ್ಮ ಮತ್ತು ಅವರ ಕುಟುಂಬಸ್ಥರು ಆಸ್ತಿ ಹಂಚಿಕೆ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಹಲ್ಲೆ ನಡೆಸಿ Murder
ಹೀಗಾಗಿ ನಿನ್ನೆ ವೀರಪ್ಪ ಅವರು ಕೋರ್ಟ್ಗೆ ಹಾಜರಾಗಿ, ಬಳಿಕ ಸಂಜೆ ವೇಳೆ ತಮ್ಮ ಜಮೀನಿನ ಕಡೆ ತೆರಳುತ್ತಿದ್ದರು. ಈ ವೇಳೆ ವೀರಪ್ಪ ಅವರನ್ನು ಹಿಂಬಾಲಿಸಿಕೊಂಡು ಬಂದ ಮಲ್ಲಮ್ಮನ ಮಕ್ಕಳಾದ ಹರೀಶ ಹಾಗು ಪ್ರಕಾಶ ಮತ್ತು ಮಹದೇವಮ್ಮನ ಮಗನಾದ ಮಹದೇವ, ವೀರಪ್ಪ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಬಳಿಕ ಮೃತದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಆರೋಪ ಕೇಳಿಬಂದಿದೆ. ಅಲ್ದೇ ಬೆಂಕಿ ಹಚ್ಚಿದ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ. ವೀರಪ್ಪ ಅವರ ಮೃತದೇಹ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಕೊಲೆ ಪ್ರಕರಣ ದಾಖಲು
ವೀರಪ್ಪನ ಪುತ್ರ ವಿವೇಕ್ ನೀಡಿದ ದೂರಿನ ಮೇರೆಗೆ ಮಲ್ಲಮ್ಮ, ಮಹದೇವಮ್ಮ, ಹರೀಶ್, ಲೋಕೇಶ್, ಮಹದೇವ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ಆಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನು ನೋಡಿ : SSLC, ಪಿಯು ವಿದ್ಯಾರ್ಥಿಗಳೇ ಗಮನಿಸಿ ಯಾವತ್ತಿಂದ ಎಕ್ಸಾಂ.. ಯಾವಾಗ ರಿಸಲ್ಟ್




