
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆನ್ಲೈನ್ ಮೂಲಕವೇ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಹಣ ದೋಚುವ ಪ್ರಕರಣಗಳು ಆತಂಕಕಾರಿಯಾಗಿ ಮುಂದುವರಿಯುತ್ತಿವೆ.ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ವರದಿ ಪ್ರಕಾರ, ಕಳೆದ 3 ವರ್ಷಗಳಲ್ಲಿ ಮಾತ್ರವೇ ಸುಮಾರು 10,300 ಕೋಟಿ ರೂ. ಸೈಬರ್ ಖದೀಮರು ದೋಚಿದ್ದಾರೆ.
🔴 ವಂಚಕರ ಹೊಸ ತಂತ್ರ:
ಸಾಮಾನ್ಯ ಜನರನ್ನು ಮೋಸಗೊಳಿಸಲು ಪ್ರತಿಷ್ಠಿತ ಬ್ಯಾಂಕ್ಗಳ ಹೆಸರಿನಲ್ಲಿ ನಕಲಿ ಅಪ್ಲಿಕೇಶನ್ಗಳನ್ನು ತಯಾರಿಸಿ, “ಕೆವೈಸಿ ಅಪ್ಡೇಟ್ ಮಾಡಿ” ಎಂದು ಮೆಸೇಜ್ ಕಳುಹಿಸುವುದು. ಆ ಲಿಂಕ್ ಕ್ಲಿಕ್ ಮಾಡಿದವರು ನಕಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿದರೆ, ಅಡ್ಹಾರ್, ಪ್ಯಾನ್ ಹಾಗೂ ಬ್ಯಾಂಕ್ ವಿವರಗಳನ್ನು ಪಡೆದು ಖಾತೆಯಿಂದ ನೇರವಾಗಿ ಹಣ ಕದ್ದುಕೊಳ್ಳುತ್ತಾರೆ.
ಇಂತಹ ನಕಲಿ ಅಪ್ಲಿಕೇಶನ್ಗಳನ್ನು ವಾಟ್ಸಾಪ್, ಟೆಲಿಗ್ರಾಂ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಹೆಚ್ಚು ಹಂಚಲಾಗುತ್ತಿದೆ ಎಂದು ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
⚠️ ಜನರಿಗೆ ನೀಡಿರುವ ಸೂಚನೆಗಳು:
- ಅನುಮಾನಾಸ್ಪದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಅಥವಾ ಇನ್ಸ್ಟಾಲ್ ಮಾಡಬಾರದು.
- ತಪ್ಪಾಗಿ ಇನ್ಸ್ಟಾಲ್ ಆಗಿದ್ದರೆ, ತಕ್ಷಣ ಡೇಟಾ ಆಫ್ ಮಾಡಿ, ಆ ಅಪ್ಲಿಕೇಶನ್ ಅನ್ನು ಅನ್ಇನ್ಸ್ಟಾಲ್ ಮಾಡಿ.
- ಮೊಬೈಲ್ ಸೆಟ್ಟಿಂಗ್ಸ್ನಲ್ಲಿ ಅಪ್ಲಿಕೇಶನ್ ಮ್ಯಾನೇಜ್ಮೆಂಟ್ ಪರಿಶೀಲಿಸಿ, ಅಜ್ಞಾತ ಫೈಲ್ಗಳನ್ನು ಡಿಲೀಟ್ ಮಾಡಿ.
- ಕ್ಲೀನ್ ಟೂಲ್ ಬಳಸಿ ಮೊಬೈಲ್ ಸ್ವಚ್ಛಗೊಳಿಸಿಕೊಳ್ಳಿ.
🚨 ಮೋಸ ನಡೆದರೆ ಏನು ಮಾಡಬೇಕು?
- ತಕ್ಷಣ ಸೈಬರ್ ಪೋರ್ಟಲ್ ಅಥವಾ ಸೈಬರ್ ಪೊಲೀಸ್ ಠಾಣೆಗೆ ದೂರು ಕೊಡಿ.
- 1930 ಈ ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.
- #67# ಡಯಲ್ ಮಾಡಿ ನಿಮ್ಮ ಮೊಬೈಲ್ ನಂಬರ್ ಸುರಕ್ಷಿತಗೊಳಿಸಬಹುದು.
👉 ತಂತ್ರಜ್ಞಾನ ಬೆಳವಣಿಗೆಯ ಜೊತೆಗೇ ಸೈಬರ್ ಅಪರಾಧವೂ ವೇಗವಾಗಿ ಹೆಚ್ಚುತ್ತಿದೆ. ಆದ್ದರಿಂದ ಬ್ಯಾಂಕಿಂಗ್ ಸಂಬಂಧಿತ ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೊದಲು ಅದು ಅಧಿಕೃತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.




