Chamarajanagara : ಗುಂಡಾಲ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆ : ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ, ಪರಿಶೀಲನೆ!

Chamarajanagara ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದಲ್ಲಿ ಭಾನುವಾರ ಹುಲಿಯೊಂದರ ಮೃತದೇಹ ಸಿಕ್ಕಿದೆ. ಇದು ಗಂಡು ಹುಲಿಯಾಗಿದ್ದು, 5ರಿಂದ 6 ವರ್ಷ ಪ್ರಾಯ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಕುರಿತು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಗಸ್ತಿನಲ್ಲಿರುವಾಗ ಹುಲಿ ಸಾವು
BRT Tiger Reserve ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಶಾಖೆಯಲ್ಲಿ ಸಿಬ್ಬಂದಿ ಗಸ್ತಿನಲ್ಲಿರುವಾಗ ಹುಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : ಡ್ಯೂಟಿ ಟೈಂನಲ್ಲೇ ಬೆಸ್ಕಾಂ ಅಧಿಕಾರಿಗಳ ಮಸ್ತ್ ಎಣ್ಣೆ ಪಾರ್ಟಿ..!
ನೀರಿನ ದಡದಲ್ಲಿ ಮೃತಪಟ್ಟಿರುವ ಸಾಧ್ಯತೆ
ಮೇಲ್ನೋಟಕ್ಕೆ ಉರುಳಿಗೆ ಸಿಲುಕಿ ಗುಂಡಾಲ್ ಡ್ಯಾಮ್ ಹತ್ತಿರ ಬಂದು ನೀರಿನ ದಡದಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ. ಎನ್ಟಿಸಿಎ ಮಾರ್ಗಸೂಚಿಯಂತೆ ಎನ್ಟಿಸಿಯ ನಾಮನಿರ್ದೇಶಿತ ಪ್ರತಿನಿಧಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮುಖ್ಯ ವನ್ಯಜೀವಿ ಪರಿಪಾಲಕರ ಸಮ್ಮುಖದಲ್ಲಿ ಪಶು ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೇಬರವನ್ನು ಸುಡಲಾಗುವುದು.
ಪ್ರಕರಣ ದಾಖಲು
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಇಲಾಖೆ ಹೇಳಿದೆ.

ಇದನ್ನು ನೋಡಿ : ಪ್ರಿಯಕರನ ಮನೆಯಲ್ಲಿ ತಗ್ಲಾಕೊಂಡ ಆಂಟಿ – ಹಾಸನ SP ಸ್ಫೋಟಕ ಮಾಹಿತಿ | HASSAN




