Chikkaballapura : ಕೆಲಸದ ಟೈಂನಲ್ಲೇ ಡಾಬಾದಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ – ಬೆಸ್ಕಾಂ ಅಧಿಕಾರಿಗಳ ಮಸ್ತ್ ಮಸ್ತ್ ಎಣ್ಣೆ ಪಾರ್ಟಿ..!?

ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ ಅಂತಾರೆ. ಸರ್ಕಾರಿ ಕೆಲಸ ಪಡೆದುಕೊಳ್ಳಲು ಹಗಲು ರಾತ್ರಿ ಎನ್ನದೇ ಓದಿ, ಎಕ್ಸಾಂ ಬರೆದು ಪರೀಕ್ಷೆಯಲ್ಲಿ ಪಾಸ್ ಆಗಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಆದ್ರೆ ಕೆಲಸ ಸಿಕ್ಕ ಬಳಿಕ ಅವರು ಮಾಡೋ ಕೆಲಸನೇ ಬೇರೆ. ಹೌದು ಬೆಸ್ಕಾಂ ಅಧಿಕಾರಿಗಳು ಕೆಲಸದ ಸಮಯದಲ್ಲೇ ಭರ್ಜರಿ ಪಾರ್ಟಿ ಮಾಡಿದ್ದು, ಅಧಿಕಾರಿಗಳು ಪಾರ್ಟಿ ಮಾಡಿರೋ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಅಧಿಕಾರಿಗಳ ಪಾರ್ಟಿ ವಿಡಿಯೋ ಫುಲ್ ವೈರಲ್
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಬೆಸ್ಕಾಂ ಉಪ ವಿಭಾಗದ ಡಿ.ಪಾಳ್ಯ ಶಾಖೆಯ ಜೂನಿಯರ್ ಇಂಜಿನಿಯರ್ ರಾಘವೇಂದ್ರ, ಲೈನ್ ಮನ್ ಶ್ರೀನಿವಾಸ್ ಸೇರಿದಂತೆ ಹಲವು ಸಿಬ್ಬಂದಿ ಕೆಲಸದ ಸಮಯದಲ್ಲೇ ಡಾಬಾದಲ್ಲಿ ಪಾರ್ಟಿ ಮಾಡಿದ್ದು, ಪಾರ್ಟಿ ಮಾಡಿರೋ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಇಬ್ಬರು ಮಕ್ಕಳು ನೀರು ಪಾಲು!

ಕಚೇರಿ ಏನಕ್ಕೆ ಇವರಿಗೆ? – Chikkaballapura
ಕರ್ತವ್ಯ ನಿರತ ನೌಕರರು ಕಚೇರಿ ವೇಳೆ ಡಾಬಾಗೆ ತೆರಳಿರೋ ನೌಕರರು, ಎಣ್ಣೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡಿರೋದು ಅಲ್ಲದೇ ಡಾಬಾವನ್ನೇ ಕಚೇರಿ ಮಾಡಿಕೊಂಡು ಫೈಲ್ಗಳನ್ನು ಚೆಕ್ ಮಾಡಿದ್ದಾರೆ. ಬೆಸ್ಕಾಂ ಅಧಿಕಾರಿಗಳ ಪಾರ್ಟಿಯ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಅಧಿಕಾರಿಗಳ ಪಾರ್ಟಿ ವಿಡಿಯೋಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದು, ಎಲ್ಲೆಂದರಲ್ಲಿ ಕಡತ ಪರಿಶೀಲಿಸೋದಾದ್ರೆ ಕಚೇರಿ ಏನಕ್ಕೆ ಇವರಿಗೆ? ಅಂತ ನೆಟ್ಟಿಗರ ಪ್ರಶ್ನೆ ಮಾಡ್ತಿದ್ದಾರೆ.
ಪಾರ್ಟಿ ಮಾಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ
ಸಂಬಂಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು, ಎಣ್ಣೆ ಪಾರ್ಟಿ ಮಾಡಿ, ಕಡತಗಳನ್ನು ಪರಿಶೀಲನೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ, ಮುಂದೆ ಇಂತಹ ಕೃತ್ಯ ಎಸಗುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕಿದೆ.
ಇದನ್ನು ನೋಡಿ : LOVE MARRIAGE | ವಿರೋಧದ ನಡುವೆ ಮದುವೆ ಆದ ಪ್ರೇಮಿಗಳು




