Dharwad ದಲ್ಲಿ ಕೊರಿಯನ್ ಗೇಮ್ ವ್ಯಸನಕ್ಕೆ ಒಳಗಾದ 20 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನೆಡೆದಿದೆ.

Dharwad : ಕೊರಿಯನ್ ಗೇಮ್ ಗೀಳಿಗೆ ಒಳಗಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್ ಪ್ರದೇಶದಲ್ಲಿ ನಡೆದಿದೆ. ಯುವಕರಲ್ಲಿ ಹೆಚ್ಚುತ್ತಿರುವ ಆನ್ಲೈನ್ ಗೇಮ್ ವ್ಯಸನದ ಬಗ್ಗೆ ಈ ಘಟನೆ ಮತ್ತೊಮ್ಮೆ ಆತಂಕ ಮೂಡಿಸಿದೆ.
ಮಾಹಿತಿಯ ಪ್ರಕಾರ, ಪಿಯುಸಿ ಸೈನ್ಸ್ ಪೂರ್ಣಗೊಳಿಸಿ ಮನೆಯಲ್ಲೇ ಇದ್ದ 20 ವರ್ಷದ ವಿಕಾಸ್ ಎಂಬ ಯುವಕ, ಯಾರಿಗೂ ತಿಳಿಯದೇ ಆನ್ಲೈನ್ ಕೊರಿಯನ್ ಗೇಮ್ಗಳನ್ನು ನಿರಂತರವಾಗಿ ಆಡುತ್ತಿದ್ದನು. ತನಿಖೆಯ ವೇಳೆ ಅವನು ಗೇಮ್ ವ್ಯಸನಕ್ಕೆ ಒಳಗಾಗಿದ್ದ ಎಂಬುದು ತಿಳಿದುಬಂದಿದೆ.

ಇನ್ನೂ, ಸಾವಿಗೆ ಮುನ್ನ “ನನ್ನ ಸಾವಿಗೆ ನಾನೇ ಕಾರಣ” ಎಂದು ಸ್ವಯಂ ಮೆಸೇಜ್ ಬರೆದಿದ್ದು, ಬಳಿಕ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಪರಿಶೀಲನೆ ವೇಳೆ ಸಿಕ್ಕ ಮಾಹಿತಿ
ಘಟನೆ ನಂತರ ಪೊಲೀಸರು ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಈ ವೇಳೆ ಯುವಕ ನಿರಂತರವಾಗಿ ಕೊರಿಯನ್ ಗೇಮ್ ಆಡುತ್ತಿದ್ದಿರುವ ದಾಖಲೆಗಳು ಪತ್ತೆಯಾಗಿವೆ. ಈ ಪ್ರಕರಣವನ್ನು ಅಸಹಜ ಸಾವು ಎಂದು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : ಜಾತ್ರೆ ವೇಳೆ Male Mahadeshwara ಬೆಟ್ಟದಲ್ಲಿ ಭೀಕರ ಅಪಘಾತ..!!

ಹೆಚ್ಚುತ್ತಿರುವ ಗೇಮ್ ವ್ಯಸನದ ಅಪಾಯ
ಈ ದುರ್ಘಟನೆ ಯುವಕರಲ್ಲಿ ಹೆಚ್ಚುತ್ತಿರುವ ಆನ್ಲೈನ್ ಗೇಮ್ ಗೀಳಿನ ಅಪಾಯವನ್ನು ಮತ್ತೆ ನೆನಪಿಸಿದೆ. ತಜ್ಞರು ಹೇಳುವಂತೆ, ಗೇಮ್ ಬಳಕೆ ನಿಯಂತ್ರಣದಲ್ಲಿರಬೇಕು ಮತ್ತು ಕುಟುಂಬ ಸದಸ್ಯರು ಮಕ್ಕಳ ಆನ್ಲೈನ್ ಚಟುವಟಿಕೆಗಳ ಮೇಲೆ ಗಮನಹರಿಸಬೇಕು.
ಇದನ್ನು ನೋಡಿ : TUMAKURU| ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ ಮಗಳು




