ಇನ್ಮುಂದೆ ಅಧಿಕೃತ ಕಾರ್ಯಕ್ರಮಗಳಲ್ಲಿ ಜನಗಣಮನಗೂ ಮುನ್ನ Vande Mataram ನುಡಿಸುವುದು ಕಡ್ಡಾಯ.

ದೇಶದ ಸಾಂಸ್ಕೃತಿಕ ಮತ್ತು ದೇಶಭಕ್ತಿಯ ಸಂಕೇತವಾದ ‘Vande Mataram’ ಗೀತೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯ ಮಹತ್ವದ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಇನ್ಮುಂದೆ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ಜನಗಣಮನ’ಗೂ ಮುನ್ನ ‘ವಂದೇ ಮಾತರಂ’ ಗೀತೆಯನ್ನು ಹಾಡಬೇಕು ಅಥವಾ ನುಡಿಸಬೇಕು ಎಂದು ಸೂಚಿಸಲಾಗಿದೆ.
ಮೊದಲಿಗೆ, ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗೌರವ ಸಲ್ಲಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ದೇಶಭಕ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ತರಲಾಗಿದೆ.
ಇದನ್ನು ಓದಿ : ಇಬ್ಬರು ಮಕ್ಕಳಿರೋದನ್ನು ಮುಚ್ಚಿಟ್ಟು ಯುವಕ ನೊಂದಿಗೆ ವಿವಾಹವಾದ ಮಹಿಳೆ!

ಯಾವ ಕಾರ್ಯಕ್ರಮಗಳಲ್ಲಿ ಕಡ್ಡಾಯ?
ಹೊಸ ಮಾರ್ಗಸೂಚಿಯ ಪ್ರಕಾರ ಕೆಳಗಿನ ಸಂದರ್ಭಗಳಲ್ಲಿ ‘ವಂದೇ ಮಾತರಂ’ ಕಡ್ಡಾಯವಾಗಿ ನುಡಿಸಬೇಕು ಅಥವಾ ಹಾಡಬೇಕು:
- ರಾಷ್ಟ್ರಪತಿಗಳು ಭಾಗವಹಿಸುವ ಅಧಿಕೃತ ಕಾರ್ಯಕ್ರಮಗಳು
- ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳು
- ಸರ್ಕಾರದ ಅಧಿಕೃತ ಕಾರ್ಯಕ್ರಮಗಳು
- ಚಿತ್ರಮಂದಿರಗಳಲ್ಲಿ ವಿಶೇಷ ಸಂದರ್ಭಗಳು
- ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮಗಳು
- ರಾಷ್ಟ್ರಪತಿ ಮತ್ತು ರಾಜ್ಯಪಾಲರ ಆಗಮನ ಹಾಗೂ ಭಾಷಣಗಳ ಮುನ್ನ-ನಂತರ

ಗೀತೆಯ ಅವಧಿ ಮತ್ತು ನಿಯಮಗಳು
- ಒಟ್ಟು 6 ಚರಣಗಳ ‘ವಂದೇ ಮಾತರಂ’ ಗೀತೆಯನ್ನು ಬಳಸಬೇಕು
- ಗೀತೆಯ ಅವಧಿ ಸುಮಾರು 3 ನಿಮಿಷ 10 ಸೆಕೆಂಡುಗಳು
- ಗೀತೆ ನುಡಿಸುವಾಗ ಅಥವಾ ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು
ಕಾನೂನು ನಿಯಮಗಳು
‘ರಾಷ್ಟ್ರದ ಗೌರವಕ್ಕೆ ಅಪಮಾನ ತಡೆ’ ಕಾಯ್ದೆಯಡಿ, ರಾಷ್ಟ್ರಗೀತೆ ಅಥವಾ ರಾಷ್ಟ್ರೀಯ ಗೀತೆಗೆ ಅಡ್ಡಿಪಡಿಸುವವರಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ವಿಶೇಷವೆಂದರೆ, 1937ರಲ್ಲಿ ತೆಗೆದುಹಾಕಿದ್ದ 4 ಚರಣಗಳನ್ನು ಸೇರಿಸಿ ಇನ್ಮುಂದೆ ಸಂಪೂರ್ಣ 6 ಚರಣಗಳ ಆವೃತ್ತಿಯನ್ನು ಬಳಸಲಾಗುತ್ತದೆ. ‘ವಂದೇ ಮಾತರಂ’ ಗೀತೆಯನ್ನು ಬಂಕಿಮ್ ಚಂದ್ರ ಚಟರ್ಜಿ ಅವರು 1875ರಲ್ಲಿ ರಚಿಸಿದ್ದರು.
ಇದನ್ನು ನೋಡಿ : ಕೊಡಿಗೇನಹಳ್ಳಿ ಅಭಿವೃದ್ಧಿಪಡಿಸುವೆ ಕೆ.ಎನ್.ರಾಜಣ್ಣ ಜನತೆಗೆ ಭರವಸೆ




