ಇದು ಯಾವ ಪ್ರಾಣಿ ಪರಚಿದ್ದು ಎಂದು ಟೀಕಿಸಿದ ಅಶ್ವಿನಿ; Chaitra ಖಡಕ್ ತಿರುಗೇಟು.

ಬಿಗ್ಬಾಸ್ ಆಟ ಮುಗಿದು ಎಷ್ಟೋ ದಿನಗಳಾದ್ರೂ, ಸ್ಪರ್ಧಿಗಳ ನಡುವಿನ ಮುನಿಸು ಮಾತ್ರ ಇನ್ನೂ ಮುಗಿದಿಲ್ಲ. ದೊಡ್ಮನೆಯೊಳಗೆ ನಡೆಯುತ್ತಿದ್ದ ಜಗಳ ಇದೀಗ ಸೋಶಿಯಲ್ ಮೀಡಿಯಾ ಅಂಗಳಕ್ಕೆ ಬಂದು ನಿಂತಿದೆ. ಹೌದು, ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ vs ಅಶ್ವಿನಿ ಗೌಡ ಪೋಸ್ಟ್ ವಾರ್ ಜೋರಾಗಿದೆ.
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ Post War
ಬಿಗ್ ಬಾಸ್ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದ ರಜತ್ ಮತ್ತು ಚೈತ್ರಾ ಕುಂದಾಪುರ, ಶೋ ಸಮಯದಲ್ಲಿ ಅಶ್ವಿನಿ ನಡುವೆ ವಾರ್ ಜೋರಾಗಿತ್ತು. ಇದೀಗ ಅಶ್ವಿನಿ ಪೋಸ್ಟ್ ಒಂದನ್ನ ಶೇರ್ ಮಾಡಿದ್ದು, ಚೈತ್ರಾ ಕುಂದಾಪುರ ಅವರನ್ನು ಕೆರಳುವಂತೆ ಮಾಡಿದೆ.

ಇದನ್ನು ಓದಿ : ಮದ್ಯ ಕುಡಿಯೋದನ್ನ ಬಿಡು ಎಂದಿದ್ದಕ್ಕೆ 11 ವರ್ಷದ ಮಗಳನ್ನ ಕೊಂದ ತಾಯಿ.!
ಇದು ಯಾವ ಪ್ರಾಣಿ ಪರಚಿದ್ದು ಎಂದು ಟೀಕಿಸಿದ ಅಶ್ವಿನಿ
ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಅಶ್ವಿನಿ ಗೌಡ, ತಮ್ಮ ಕೈ ಮೇಲಿರುವ ಗಾಯದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ನಲ್ಲಿ ‘ಇದು ಯಾವ ಪ್ರಾಣಿ ಪರಚಿರಬಹುದು? ಸರಿಯಾದ ಉತ್ತರ ಹಾಗೂ ಉತ್ತಮ ಶೀರ್ಷಿಕೆ ನೀಡಿದವರಿಗೆ ಸೂಕ್ತ ಬಹುಮಾನವಿದೆ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಅಲ್ಲದೆ ಮಾಧ್ಯಮಗಳ ಮುಂದೆಯೂ ಮಾತನಾಡಿ, “ಚೈತ್ರಾ ಕುಂದಾಪುರ ನನಗೆ ಟಾಸ್ಕ್ ವೇಳೆ ಉಗುರಿನಿಂದ ಪರಚಿದ್ದರು ಎಂದು ಆರೋಪಿಸಿದ್ದಾರೆ.

ಪರಚಾಟ ಆರೋಪಕ್ಕೆ ಚೈತ್ರಾ ಖಡಕ್ ತಿರುಗೇಟು!
ಅಶ್ವಿನಿ ಪೋಸ್ಟ್ಗೆ Chaitra Kundapura ಕೂಡ ತಿರುಗೇಟು ನೀಡಿದ್ದಾರೆ. ನಂಗೂ ದೇಹದ ಮೇಲೆ ಪರಚಿದ ಕಲೆಗಳಿವೆ. ಆದ್ರೆ ಕ್ಷಮಿಸಿ ನನ್ನ ಬಳಿ ಯಾವುದೇ ಪಿಆರ್ ತಂಡ ಇಲ್ಲ ಎಂದು ಕೌಂಟರ್ ಪೋಸ್ಟ್ಮಾಡಿದ್ದಾರೆ.

ಇದನ್ನು ನೋಡಿ : ಜೆಡಿಎಸ್ ನಿಂದ ಜಿ.ಟಿ ದೇವೇಗೌಡ ಗೇಟ್ ಪಾಸ್ ಹೆಚ್.ಡಿ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ




