Bidar : ರಸ್ತೆ ಪಕ್ಕದ ಬ್ರಿಡ್ಜ್ಗೆ ಬೈಕ್ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ರಸ್ತೆ ಪಕ್ಕದ ಬ್ರಿಡ್ಜ್ಗೆ ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ದಾರುಣ ಸಾವಿಗೀಡಾಗಿರುವ ಘಟನೆ Bidar ನಲ್ಲಿ ನಡೆದಿದೆ. ಹುಮನಾಬಾದ್ ತಾಲೂಕಿನ ಹಳ್ಳಿಖೇಡ-ಬಿ ಬಳಿಯ ನಾಗಣ್ಣ ಕ್ರಾಸ್ ಹತ್ತಿರ ಅಪಘಾತವಾಗಿದೆ.
ಇನ್ನು ಈ ಅಪಘಾತದಲ್ಲಿ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ವೆಂಕಟ್ ಕರಟ್ಮಲ್ (40), ಪತ್ನಿ ಶಿಲ್ಪಾ (35), ಮಗಳು ರಕ್ಷಿತಾ (12) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ದಿಗಂಬರ್ (15) ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಪಘಾತ ಹೇಗೆ ಸಂಭವಿಸಿತು?
ಕುಟುಂಬ ಸಮೇತ ಬೀದರ್ಗೆ ಹೋಗಿ ವಾಪಸ್ ರಾಜೇಶ್ವರ ಗ್ರಾಮಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ನಾಲ್ವರು ಒಂದೇ ಬೈಕ್ನಲ್ಲಿ ತೆರಳುತ್ತಿದ್ದರು. ಬೀದರ್ನಲ್ಲಿರುವ ಸೋದರ ಅಳಿಯನ ಮಗಳನ್ನ ಮಾತನಾಡಿಸೋಕೆ ಬಂದಿದ್ದರು. ವಾಪಸ್ ಆಗುವಾಗ ಸೇತುವೆಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ಇದನ್ನು ನೋಡಿ : ವಸಂತ ನರಸಾಪುರ ಬಳಿ ಮತ್ತೊಂದು ಅಗ್ನಿ ಅವಘಡ

ಕುಟುಂಬಸ್ಥರ ಆಕ್ರಂದನ
ಅಪಘಾತದ ಬಳಿಕ ದಂಪತಿ ಮತ್ತು ಮಗಳ ಮೃತದೇಹಗಳನ್ನು ಹಳ್ಳಿಖೇಡ-ಬಿ ಪಟ್ಟಣದ ಶವಾಗಾರದಲ್ಲಿ ಇಡಲಾಗಿದೆ.
ಇದೇ ವೇಳೆ ಬ್ರಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನು ಓದಿ : ನಟ Darshan ವಿಚಾರವಾಗಿ ಧನ್ವೀರ್ ತಿರುಗೇಟು..!




