
ಉದ್ಯೋಗಿಗಳ ಭವಿಷ್ಯ ನಿಧಿ (PF) ಎನ್ನುವುದು ನಿವೃತ್ತಿ ನಂತರದ ಭದ್ರತೆಗೆಂದು ಕೂಡಿಟ್ಟ ಹಣ. ಆದರೆ, ಆ ಹಣವನ್ನು ಐಷಾರಾಮಿ ಖರ್ಚುಗಳಿಗೆ ಬಳಸುವವರ ವಿರುದ್ಧ EPFO ಗಂಭೀರ ಎಚ್ಚರಿಕೆ ನೀಡಿದೆ.
➡️ EPFO ಹೇಳಿಕೆ:
ಪಿಎಫ್ ಹಣವನ್ನು ಯಾವ ಕಾರಣಕ್ಕಾಗಿ ಮುಂಗಡ ಪಡೆದಿದ್ದೀರೋ, ಅದೇ ಕಾರಣಕ್ಕೆ ಬಳಸಬೇಕು. ಒಂದು ವೇಳೆ ತಪ್ಪು ಕಾರಣ ನೀಡಿ ಹಣ ಪಡೆದು, ವಿದೇಶಿ ಪ್ರವಾಸ, ಕಾರು ಖರೀದಿ ಅಥವಾ ಐಷಾರಾಮಿ ಖರ್ಚುಗಳಿಗೆ ಬಳಸಿದರೆ, ಆ ಸಂಪೂರ್ಣ ಹಣವನ್ನು ದಂಡದ ಬಡ್ಡಿ ಸೇರಿಸಿ ಮರುಪಾವತಿಸಬೇಕಾಗುತ್ತದೆ.
➡️ ದುರ್ಬಳಕೆ ಮಾಡಿದರೆ ಏನಾಗುತ್ತದೆ?
- ಪಡೆದ ಸಂಪೂರ್ಣ ಹಣವನ್ನು ವಾಪಸ್ ಕಟ್ಟಬೇಕು
- ದಂಡದ ಬಡ್ಡಿ ಕೂಡ ಸೇರಿಸಿ EPFO ವಸೂಲಿ ಮಾಡುತ್ತದೆ
- ಮರುಪಾವತಿ ಆಗುವವರೆಗೆ ಅಥವಾ ಮುಂದಿನ 3 ವರ್ಷಗಳವರೆಗೆ ಮತ್ತೊಮ್ಮೆ ಮುಂಗಡ ಪಡೆಯಲು ಅವಕಾಶವಿಲ್ಲ
➡️ ಪಿಎಫ್ ಹಣವನ್ನು ಬಳಸಬಹುದಾದ ಕಾನೂನುಬದ್ಧ ಕಾರಣಗಳು:
- ಮನೆ ಖರೀದಿ ಅಥವಾ ನಿರ್ಮಾಣ (5 ವರ್ಷ ಸೇವೆಯ ನಂತರ)
- ಮದುವೆ (ಸ್ವಂತ/ಮಕ್ಕಳು/ಸಹೋದರ-ಸಹೋದರಿ, 7 ವರ್ಷ ಸೇವೆಯ ನಂತರ)
- ಮಕ್ಕಳ ಉನ್ನತ ಶಿಕ್ಷಣ (7 ವರ್ಷ ಸೇವೆಯ ನಂತರ)
- ತುರ್ತು ವೈದ್ಯಕೀಯ ಚಿಕಿತ್ಸೆ (ಯಾವುದೇ ಸೇವಾ ಮಿತಿ ಇಲ್ಲ)
- ನೈಸರ್ಗಿಕ ವಿಕೋಪ, ಕಂಪನಿ ಲಾಕ್ಔಟ್, ಅಶಕ್ತರಿಗೆ ಉಪಕರಣ ಖರೀದಿ
- ನಿವೃತ್ತಿಗೆ 1 ವರ್ಷ ಬಾಕಿ ಇರುವಾಗ ಹಣ ಪಡೆಯುವುದು
ಇತ್ತೀಚೆಗೆ EPFO ಮುಂಗಡ ಕ್ಲೈಮ್ಗಳಿಗೆ ಸ್ವಯಂ-ಇತ್ಯರ್ಥ ಮಿತಿಯನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಿದೆ. ಆದರೆ ಈ ಸೌಲಭ್ಯವನ್ನು ದುರುಪಯೋಗ ಮಾಡಿದರೆ ಕಾನೂನು ಕ್ರಮ ತಪ್ಪದೇ ಎದುರಿಸಬೇಕಾಗುತ್ತದೆ.




