Shivamogga : ವ್ಯಕ್ತಿಯೋರ್ವ ಮನೆಯಲ್ಲೇ ಅಕ್ರಮವಾಗಿ ಬಂದೂಕು ತಯಾರಿಸುತ್ತಿದ್ದು, ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Shivamogga : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ಬಂದೂಕು ತಯಾರಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಬಂದೂಕು ತಯಾರಿಕಾ ಘಟಕ ಮೇಲೆ ಪೊಲೀಸರು ದಾಳಿ
ಇನ್ನು ಬಂಧಿತ ವ್ಯಕ್ತಿಯನ್ನು ಲಕ್ಷ್ಮಣಪ್ಪ (67) ಎಂದು ಗುರುತಿಸಲಾಗಿದೆ. ಪೊಲೀಸ್ ಮಾಹಿತಿಯ ಪ್ರಕಾರ, ಆರೋಪಿ ತನ್ನ ಹಳೆಯ ಮನೆಯಲ್ಲಿ 7 ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸರ್ಚ್ ವಾರೆಂಟ್ ಪಡೆದು ಅಕ್ರಮವಾಗಿ ಬಂದೂಕು ತಯಾರಿಸಿ ನಡೆಸ್ತಿದ್ದ ಸ್ಥಳದಲ್ಲಿ ದಾಳಿ ನಡೆಸಿದ್ದರು. ದಾಳಿ ವೇಳೆ ಅಕ್ರಮ ಬಂದೂಕುಗಳು ಪತ್ತೆಯಾಗಿದ್ದು, ಎಲ್ಲವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : Reels ರಾಣಿ ಸುಚಿತ್ರಾ–ಜ್ಯೋತಿಷಿ ಕಮಲಾಕರ್ ಭಟ್ ಪ್ರೇಮ ಪ್ರಕರಣಕ್ಕೆ ಟ್ವಿಸ್ಟ್.!
ಶಿಕಾರಿಪುರ ಪೊಲೀಸರ ದಾಳಿ: ಬಂದೂಕುಗಳು ವಶಕ್ಕೆ
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸುತ್ತಿದ್ದು, ದಾಳಿಯಲ್ಲಿ ಡಿಎಸ್ಪಿ ಕೇಶವ ಕೆ.ಇ, ಸಿಪಿಐ ಸಂತೋಷ್ ಎಂ.ಪಾಟೀಲ್, ಎಸ್ಐ ಶರತ್ ಹೆಚ್.ಪಿ., ಸಿಬ್ಬಂದಿ ಕೊಟ್ರೇಶಪ್ಪ, ಪ್ರದೀಪ್ ಕೆ., ನಾಗರಾಜ, ರವಿ ನಾಯ್ಕ ಮತ್ತು ರವಿಕುಮಾರ್ ಭಾಗಿಯಾಗಿದ್ದರು.
ಇನ್ನು ತನಿಖಾ ತಂಡದ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಅಭಿನಂದನೆ ಸಲ್ಲಿಸಿದ್ದಾರೆ.
MUST WATCH : ದೇವರಾಯನದುರ್ಗ ಮೀಸಲು ಅರಣ್ಯಕ್ಕೆ ಕಿಡಿಗೇಡಿಗಳಿಂದ ಬೆಂಕಿ – ಹೊತ್ತಿ ಉರಿದ ಬೆಳಗುಂಬ ಸಮೀಪದ ಅರಣ್ಯ




