6 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಅಬಕಾರಿ ಸಚಿವ RB Thimmappur ರಾಜೀನಾಮೆ ನೀಡಲೇಬೇಕು ಎಂದು BJP ಆಗ್ರಹಿಸಿದೆ.

ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 6 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಬಕಾರಿ ಸಚಿವ RB Thimmappur ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ವಿಧಾನಸೌಧದ ಬಳಿ ವಿಜಯೇಂದ್ರ ವಾಗ್ದಾಳಿ
ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮಾತನಾಡಿದ ಬಿ.ವೈ ವಿಜಯೇಂದ್ರ,
ಸಿದ್ದರಾಮಯ್ಯ ಸರ್ಕಾರ ಭಾರೀ ಬಂಡತನದಿಂದ ವರ್ತಿಸುತ್ತಿದ್ದು, ಹಗರಣಗಳ ಅಲೆಯಲ್ಲಿ ಸಿಲುಕಿಕೊಂಡಿದೆ ಎಂದು ಕಿಡಿಕಾರಿದರು.
ಅವರು ಮಾತನಾಡುತ್ತಾ,
ಅಬಕಾರಿ ಇಲಾಖೆಯಲ್ಲೇ ಮನಸೋ ಇಚ್ಛೆ ಬೇಕಾಬಿಟ್ಟಿ ಲಿಕ್ಕರ್ ಲೈಸೆನ್ಸ್ ನೀಡಲಾಗಿದೆ. ಇಷ್ಟು ಭ್ರಷ್ಟಾಚಾರ ಯಾವುದೇ ಇಲಾಖೆಯಲ್ಲಿ ನಡೆದಿಲ್ಲ. 6 ಸಾವಿರ ಕೋಟಿ ಹಗರಣವಾಗಿದೆ. ಆಡಿಯೋ ಟೇಪ್ನಲ್ಲಿ ಹೆಸರುಗಳು ಕೇಳಿಬಂದಿವೆ ಎಂದು ಆರೋಪಿಸಿದರು.
ಇದನ್ನೂ ಓದಿ: ಶಾಲೆಯಲ್ಲಿ ಶಿಕ್ಷಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ.!
ಗಣಪತಿ ಪ್ರಕರಣವನ್ನು ಉಲ್ಲೇಖಿಸಿದ ವಿಜಯೇಂದ್ರ,
“ಆ ಪ್ರಕರಣದಲ್ಲಿ ಜಾರ್ಜ್ ರಾಜೀನಾಮೆ ಕೊಡಬೇಕಿತ್ತು. ಅದೇ ರೀತಿ ಅಬಕಾರಿ ಸಚಿವರ ವಿರುದ್ಧವೂ ಸಿಎಂ ಸೂಕ್ತ ಕ್ರಮ ಕೈಗೊಳ್ಳಬೇಕು. ಮೊದಲು ರಾಜೀನಾಮೆ ಪಡೆದು, ನಂತರ ತನಿಖೆ ನಡೆಸಲಿ. ತಪ್ಪಿಲ್ಲ ಅಂದರೆ ಮತ್ತೆ ಅಧಿಕಾರಕ್ಕೆ ಬರಲಿ” ಎಂದು ಹೇಳಿದರು.
ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಧಾನಸಭೆಯಲ್ಲಿ ಆರ್. ಅಶೋಕ್ ಗಂಭೀರ ಆರೋಪ
ಇನ್ನೊಂದೆಡೆ ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್,
“6 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ದಾಖಲೆ ಕೇಳಿದಾಗ ನಾವು ಐದು ದಾಖಲೆಗಳನ್ನು ನೀಡಿದ್ದೇವೆ. ಇಷ್ಟಾದರೂ ಸರ್ಕಾರ ಮೌನ ವಹಿಸಿರುವುದೇಕೆ?” ಎಂದು ಪ್ರಶ್ನಿಸಿದರು.
ಆರು ಸಾವಿರ ಕೋಟಿ ಲೂಟಿ ಆದರೂ ಸರ್ಕಾರ ಸುಮ್ಮನೆ ಇರುವುದೇಕೆ? ಎಂದು ಕಿಡಿಕಾರಿದ ಅವರು,
“ಮೊದಲು ಅಬಕಾರಿ ಸಚಿವ ಆರ್.ಬಿ ತಿಮ್ಮಾಪೂರ ರಾಜೀನಾಮೆ ಪಡೆಯಿರಿ” ಎಂದು ಸ್ಪಷ್ಟವಾಗಿ ಒತ್ತಾಯಿಸಿದರು.




