
SHIRSI CYLINDER BLAST : ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುರ್ಕಿನಕೊಡ್ಲಿ ಗ್ರಾಮದಲ್ಲಿ ನೆನ್ನೆ ಮಧ್ಯಾಹ್ನ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ 21 ವರ್ಷದ ಯುವತಿ ರಂಜನಾ ದೇವಾಡಿಗ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಳನ್ನು ರಂಜನಾ (21) ಎಂದು ಗುರುತಿಸಲಾಗಿದೆ. ರಂಜನಾ ದೇವಾಡಿಗ, ಶಿರಸಿಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು, ತಲೆನೋವಿನ ಕಾರಣ ಕಾಲೇಜಿಗೆ ರಜೆ ಹಾಕಿ ಮನೆಯಲ್ಲಿಯೇ ಊಟ ಮಾಡಿ ಮಲಗಿದ್ದ ವೇಳೆ ಅಡುಗೆ ಮನೆಯಲ್ಲಿ ಲಿಂಡರ್ ಸ್ಫೋಟಗೊಂಡಿದೆ.
ಸ್ಫೋಟದ ತೀವ್ರತೆಗೆ ಬೆಂಕಿ ಮನೆಗೆ ಆವರಿಸಿದ್ದು, ರಂಜನಾ ಅವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಮನೆಯ ಅಡುಗೆ ಕೋಣೆ, ಪಕಾಸ್ ಮತ್ತು ಹಂಚುಗಳು ಹಾರಿಹೋಗಿದ್ದು, ಮನೆ ಕೂಡಾ ಸುಟ್ಟುಹೋಗಿದೆ.
ಸಿಲಿಂಡರ್ ಸ್ಫೋಟದ ಶಬ್ದ ಕೇಳಿಸಿಕೊಂಡು ಸ್ಥಳಿಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಮನೆ ಬಾಗಿಲು ಒಡೆದು ಬೆಂಕಿ ನಂದಿಸಲು ಯತ್ನಿಸಿದರು. ಇನ್ನು ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿಗೆ ಮಾಹಿತಿ ನೀಡಲಾ ಯ್ತು. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟರೊಳಗೆ ಯುವತಿ ಮೃತಪಟ್ಟಿದ್ದರು.
ಇನ್ನು ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ.




