
Cricketer Dasun Shanaka : ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ 15ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಶ್ರೀಲಂಕಾ ತಂಡದ ಸೋತಿದೆ. ಈ ಸೋಲಿನ ಮಧ್ಯೆ ಲಂಕಾ ತಂಡದ ಹಿರಿಯ ಆಟಗಾರ ದಸುನ್ ಶಾನಕ ಬೇಡದ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿ ದ್ದಾರೆ.
ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾನಕ, ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿದ್ದು, ಅವರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಇದು 14ನೇ ಬಾರಿ ಡಕ್ ಆಗಿದ್ಧಾರೆ. ಈ ಮೂಲಕ ಅವರು ಟಿ20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರ ಎಂಬ ಹೀನಾಯ ದಾಖಲೆ ಯಲ್ಲಿ ಪ್ರಥಮ ಸ್ಥಾನಕ್ಕೇರಿದ್ದಾರೆ.
ಈ ಹಿಂದೆ ಈ ದಾಖಲೆ ಬಾಂಗ್ಲಾದೇಶದ ಸೌಮ್ಯ ಸರ್ಕಾರ್ (13 ಡಕ್ – 86 ಇನಿಂಗ್ಸ್) ಹಾಗೂ ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್ (13 ಡಕ್ – 150 ಇನಿಂಗ್ಸ್) ಅವರ ಹೆಸರಿನಲ್ಲಿ ಇತ್ತು. ಆದರೆ ಇದೀಗ 102 ಟಿ20 ಇನಿಂಗ್ಸ್ ಗಳಲ್ಲಿ 14 ಡಕ್ದಾಖಲಿಸಿದ ಶಾನಕ, ಅವರನ್ನು ಮೀರಿ ಮುಂದಕ್ಕೇರಿದ್ದಾರೆ.




