IND vs NZ : ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಜನವರಿ 31 ರಂದು ತಿರುವನಂತಪುರಂಬಲ್ಲಿ ನಡೆಯಲಿರುವ ಐದನೇ ಹಾಗೂ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಕಾದಾಟ ನಡೆಸಲು ಎದುರು ನೋಡುತ್ತಿವೆ.

IND vs NZ: ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 50 ರನ್ಗಳಿಂದ ಸೋತಿದ್ದ ಭಾರತ ತಂಡ, ನಾಳೆ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು 4-1 ಅಂತರದಲ್ಲಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.
ತಿರುವನಂತಪುರಂನ ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಈಗಾಗಲೇ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದ್ದು, ಕೊನೆಯ ಪಂದ್ಯದಲ್ಲೂ ಜಯ ಸಾಧಿಸಲು ಕಾತುರದಲ್ಲಿದೆ.
ಮೂರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಭಾರತ, ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಸರಣಿಯನ್ನು ವಶಪಡಿಸಿಕೊಂಡಿತ್ತು. ಆದ್ರೆ ವಿಶಾಖಪಟ್ಟಣಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯದಿಂದ ಭಾರಿ ಸೋಲು ಎದುರಿಸಬೇಕಾಯಿತು.

ಇದನ್ನೂ ಓದಿ : ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ Account ಇದ್ದಕ್ಕಿದ್ದಂತೆ ಮಾಯ.!
ಕಳೆದ ಪಂದ್ಯದಲ್ಲಿ ಅಲಭ್ಯರಾಗಿದ್ದ ಇಶಾನ್ ಕಿಶನ್ಗೆ ಈ ಪಂದ್ಯದಲ್ಲಿ ಸಂಜು ಬದಲಾಗಿ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ನಾಲ್ಕನೇ ಪಂದ್ಯದಲ್ಲಿ ಭಾರತ ತಂಡಕ್ಕೆ ತಿರುಗೇಟು ನೀಡಿದ್ದ ನ್ಯೂಜಿಲೆಂಡ್ ತಂಡ ಕೂಡ ಐದನೇ ಪಂದ್ಯದಲ್ಲಿ ಗೆಲುವು ಸಾಧಿಸಲು ಎದುರು ನೋಡುತ್ತಿದೆ. ಕಿವೀಸ್ ತಂಡದ ಪರ ಟಿಮ್ ಸೀಫರ್ಟ್ ಹಾಗೂ ಡೆವೋನ್ ಕಾನ್ವೆ ಪ್ಲಸ್ ಪಾಯಿಂಟ್ ಆಗಿದೆ.
ಗ್ರೀನ್ಫೀಲ್ಡ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಅನುಕೂಲಕರವಾಗಿದೆ. ಇಲ್ಲಿ ಇದುವರೆಗೆ ನಾಲ್ಕು ಟಿ20 ಪಂದ್ಯಗಳು ನಡೆದಿದ್ದು, ಒಂದರಲ್ಲಿ ಭಾರತ ಸೋಲು ಅನುಭವಿಸಿದೆ.

ಈ ಮೈದಾನದಲ್ಲಿ ಮೊದಲ ಇನಿಂಗ್ಸ್ನಲ್ಲಿ ಸರಾಸರಿ 220 ರನ್ಗಳವರೆಗೆ ಸ್ಕೋರ್ ಮಾಡಬಹುದು. ಒಟ್ಟಿನಲ್ಲಿ, ಸರಣಿಯ ಕೊನೆಯ ಪಂದ್ಯವು ಎರಡೂ ತಂಡಗಳಿಗೂ ವಿಶ್ವಕಪ್ ತಯಾರಿಯ ದೃಷ್ಟಿಯಿಂದ ಮಹತ್ವದ್ದಾಗಿದ್ದು, ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.
MUST WATCH : ಲಂಚಕ್ಕೆ ಡಿಮ್ಯಾಂಡ್ ಮಾಡಿದ ಪೊಲೀಸಪ್ಪ- ತಗ್ಲಾಕಿಕೊಳ್ಳುತ್ತಿದ್ದಂತೆ ಫುಲ್ ಡ್ರಾಮಾ..?




