ಇದೀಗ Rajeev Gowda ಗೆ ಆಶ್ರಯ ನೀಡಿದ್ದ ಮಂಗಳೂರು ಮೂಲದ ಉದ್ಯಮಿ ಮೈಕಲ್ ಸಹ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಕಲ್ಟ್ ಸಿನಿಮಾ ಬ್ಯಾನರ್ ತೆರವು ಮಾಡಿದ್ದ ವಿಚಾರದಲ್ಲಿ ನಿಂದಿಸಿ, ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ Rajeev Gowda 13 ದಿನಗಳ ನಂತರ ಪೋಲಿಸರಿಂದ ಬಂಧನಗೆ ಒಳಗಾಗಿದ್ದಾರೆ. ಬಂಧನ ಕೇರಳ ಗಡಿಯಲ್ಲಿ ನಡೆದಿದೆ.
ಜನವರಿ 12 ರಂದು ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಿಗೆ ಕಲ್ಟ್ ಸಿನಿಮಾದ ಬ್ಯಾನರ್ ತೆರವು ಮಾಡಲು ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ನೀಡಿದ್ದರು. ಈ ಬಗ್ಗೆ ಜನವರಿ 14ರಂದು FIR ದಾಖಲಾಗಿದೆ.

ಪರಾರಿಯಾದ ರಾಜೀವ್ ಗೌಡ
13 ದಿನಗಳ ಕಾಲ ಚಿಕ್ಕಬಳ್ಳಾಪುರ ಬಿಟ್ಟು ಪರಾರಿಯಾಗಿದ್ದ ರಾಜೀವ್ ಗೌಡ, ಬಂಧನ ಭೀತಿಯಲ್ಲಿದ್ದ. ಈ ಅವಧಿಯಲ್ಲಿ, ಮಂಗಳೂರಿನಲ್ಲಿ ಉದ್ಯಮಿಯೊಬ್ಬನ ಬಳಿ ಆಶ್ರಯ ಪಡೆದಿದ್ದಾನೆ.
ಇದನ್ನು ಓದಿ : ಬೆಂಗಳೂರಿನಲ್ಲಿ ಮತ್ತೊಂದು ATM ವಾಹನ ದರೋಡೆ
ಆಶ್ರಯ ನೀಡಿದ ಉದ್ಯಮಿ ಬಂಧನ
ರಾಜೀವ್ ಗೌಡಗೆ ಆಶ್ರಯ ನೀಡಿದ್ದ ಮಂಗಳೂರು ಮೂಲದ ಉದ್ಯಮಿ ಮೈಕಲ್ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರಿಗೂ ಬೆಳಗಿನ ತಿಂಡಿ ಮತ್ತು ಕಾಫಿ ನೀಡಲಾಗಿದ್ದು, ನಂತರ ವಶಕ್ಕೆ ತೆಗೆದುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಪೊಲೀಸ್ ಅಧಿಕಾರಿಗಳು ಈ ಬಂಧನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದು, ಅನಧಿಕೃತ ಹಾಗೂ ಧಮ್ಕಿ ಪ್ರಕರಣಗಳ ಕುರಿತು ತನಿಖೆ ಮುಂದುವರಿಯುತ್ತಿದೆ.
ಇದರೊಂದಿಗೆ ಸ್ಥಳೀಯ ಜನತೆಗೆ ನ್ಯಾಯ ವ್ಯವಸ್ಥೆಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದರ ದೃಷ್ಟಾಂತವಾಗಿ ಈ ಘಟನೆ ಗಮನ ಸೆಳೆಯುತ್ತಿದೆ.
ಇದನ್ನು ನೋಡಿ : NELAMANGALA | ಹಣದ ವಿಚಾರಕ್ಕೆ ರೌಡಿಶೀಟರ್ನನ್ನು ಕೊಲೆಗೈದ ಸ್ನೇಹಿತರು




