ಬೆಂಗಳೂರು ಸಾದರಮಂಗಲ ಬಳಿ BMTC ಬಸ್ ರಿವರ್ಸ್ ತೆಗೆಯುವ ವೇಳೆ ರೈಲಿಗೆ ಡಿಕ್ಕಿಯಾದ ಘಟನೆ ನಡೆದಿದೆ.

BMTC Bus ರಿವರ್ಸ್ ತೆಗೆಯುವ ವೇಳೆ ರೈಲಿಗೆ (Train) ಡಿಕ್ಕಿಯಾದ ಘಟನೆ ಸಾದರಮಂಗಲ (Sadaramangala) ಬಳಿ ನಡೆದಿದೆ. ಈ ಅಪಘಾತದಲ್ಲಿ ಬಸ್ನ ಹಿಂಭಾಗ ಗಂಭೀರವಾಗಿ ಜಖಂಗೊಂಡಿದೆ.
ರಿವರ್ಸ್ ವೇಳೆ ನಡೆದ ಅಪಘಾತ
ಘಟಕ 51ರ ಬಿಎಂಟಿಸಿ ಬಸ್, ರೈಲ್ವೆ ಪ್ಯಾರಲಲ್ ರಸ್ತೆಯ ಬಳಿ ರಿವರ್ಸ್ ತೆಗೆಯುವಾಗ ಸಾಗುತ್ತಿದ್ದ ರೈಲಿಗೆ ಡಿಕ್ಕಿಯಾಗಿದೆ. ಬಸ್ ಘಟಕದಿಂದ ಕಾಡುಗೋಡಿ ನಿಲ್ದಾಣದತ್ತ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಇದನ್ನು ಓದಿ : ಮಹಿಳೆಗೆ ಲೈಂಗಿಕ ಕಿರಕುಳ – Dhurandhar ಕಲಾವಿದನ ಬಂಧನ
ಅಪಘಾತ ಸಂಭವಿಸಿದ ವೇಳೆ ಬಸ್ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಇದರಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಇಲ್ಲದಿದ್ದರೆ ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆ ಇತ್ತು.
ಚಾಲಕನ ಅಜಾಗರುಕತೆ ಶಂಕೆ
ಪ್ರಾಥಮಿಕ ಮಾಹಿತಿ ಪ್ರಕಾರ, ಚಾಲಕನ ಅಜಾಗರುಕತೆಯೇ ಈ ಅಪಘಾತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಘಟನೆ ಸಂಬಂಧ ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.
ಇದನ್ನು ನೋಡಿ : ತುಮಕೂರು ಗ್ರಾಮಾಂತರದಲ್ಲಿ ದಳಪತಿಗೆ ಭರ್ಜರಿ ರೆಸ್ಪಾನ್ಸ್




