
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL) ತನ್ನಲ್ಲಿ ಖಾಲಿ ಇರುವ 27 ಸಹಾಯಕ ವ್ಯವಸ್ಥಾಪಕರ (Assistant Manager) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಹುದ್ದೆಯ ವಿವರ:
- ಹುದ್ದೆ ಹೆಸರು: ಸಹಾಯಕ ವ್ಯವಸ್ಥಾಪಕ (Assistant Manager)
- ಖಾಲಿ ಹುದ್ದೆಗಳ ಸಂಖ್ಯೆ: 27
- ಸಂಸ್ಥೆ: KMF SHIMUL – ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ
ಅರ್ಹತೆ:
ಸಂಬಂಧಿತ ವಿಷಯದಲ್ಲಿ ಪದವಿ/ಪಿಜಿ ಪದವಿ ಅಥವಾ ತಾಂತ್ರಿಕ ವಿದ್ಯಾರ್ಹತೆ (ಹುದ್ದೆಗನುಸಾರ)
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದಕ್ಕೆ ನಿಗದಿಯಾಗಿರುವ 1000 ರೂಪಾಯಿ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು (2ಎ, 2ಬಿ, 3ಎ ಮತ್ತು 3ಬಿ) ಪಾವತಿಸಬೇಕು. ಆಯ್ಕೆ ಆದವರಿಗೆ ಮಾಸಿಕ 34100 ರೂಪಾಯಿಯಿಂದ 99400 ರೂ.ವರೆಗೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ಲಿಂಕ್ ‘kmf-shimul-recruitment-2025 / https://www.shimul.coop/?cat=5 ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀಡಲಾಗಿರುವ ಅರ್ಜಿ ಭರ್ತಿ ಮಾಡಬೇಕು. ಜಾತಿವಾರು ನಿಮಗೆ ಅರ್ಜಿ ಶುಲ್ಕವಿದ್ದರೆ ಪಾವತಿಸಬೇಕು. ಅಗತ್ಯ ದಾಖಲೆ ಅಪ್ಲೋಡ್ ಮಾಡಬೇಕು.




