Karnataka ಹಲವೆಡೆ ಕೋಳಿ ಮಾಂಸದ ಬೆಲೆ ಏಕಾಏಕಿ 340–350 ರೂ. ದಾಟಿದೆ.

Karnataka ದ ಹಲವೆಡೆ ಕೋಳಿ ಮಾಂಸದ ಬೆಲೆ ಏಕಾಏಕಿ ಹೆಚ್ಚಾಗಿದೆ. ವಿಶೇಷವಾಗಿ ವಿದೌಟ್ ಸ್ಕಿನ್ ಚಿಕನ್ ತಿನ್ನುವ ನಾನ್ವೆಜ್ ಪ್ರಿಯರಿಗೆ ಇದು ದೊಡ್ಡ ಶಾಕ್. ಕಳೆದ ಡಿಸೆಂಬರ್ನಲ್ಲಿ ಕೆಜಿ ಕೋಳಿ 260–280 ರೂ.ಗೆ ಲಭ್ಯವಾಗುತ್ತಿದ್ದರೆ, ಈಗ 340–350 ರೂ. ದರ ತಲುಪಿದ್ದು, ಕೆಲವು ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ 370–380 ರೂ. ಆಗುವ ಸಾಧ್ಯತೆ ಇದೆ.
ಚಿಕನ್ ಬೆಲೆ ಏರಿಕೆಯ ಕಾರಣಗಳು
ಕೋಳಿ ಮಾಂಸದ ಬೆಲೆ ಏರಿಕೆಗೆ ಹಲವಾರು ಕಾರಣಗಳಿವೆ:
- ತಮಿಳುನಾಡು–ಆಂಧ್ರಪ್ರದೇಶ ಪ್ರತಿಭಟನೆ: ಕೋಳಿ ಸಾಕಾಣೆದಾರರು ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
- ಉತ್ಪಾದನೆ ಕುಸಿತ: ಕೋಳಿ ಪೂರೈಕೆ ಬೇಡಿಕೆಗೆ ತಕ್ಕಂತೆ ಲಭ್ಯವಿಲ್ಲದ ಕಾರಣ, ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿದ್ದು, ಬೆಲೆ ಏರಿಕೆಯಂತೆ ಪರಿಣಾಮ ಬೀರುತ್ತಿದೆ.
ಇದನ್ನು ಓದಿ : Honnavar ಸೂಳೆಮುರ್ಕಿಯಲ್ಲಿ ನೆಡೆದಿದೆ ಡಬಲ್ ಮರ್ಡರ್..!!

ನಾನ್ವೆಜ್ ಹೋಟೆಲ್ಗಳ ಮೇಲೆ ಪರಿಣಾಮ
ಚಿಕನ್ ಬೆಲೆ ಏರಿಕೆಯ ಪರಿಣಾಮ ನಾನ್ವೆಜ್ ಹೋಟೆಲ್ಗಳ ಮೇಲೆ ಸಹ ಬೀರುತ್ತದೆ. ಬಿರಿಯಾನಿ, ಕಬಾಬ್ ಮತ್ತು ಇತರ ಚಿಕನ್ ಆಹಾರದ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಿಗೆ ತಮಿಳುನಾಡಿನಿಂದ ಕೋಳಿ ಮತ್ತು ಕೋಳಿ ಮಾಂಸ ಪೂರೈಕೆ ಆಗುತ್ತಿರುವುದರಿಂದ, ಹೊರರಾಜ್ಯದ ಬೆಳವಣಿಗೆಗಳು ರಾಜ್ಯದ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರುತ್ತಿವೆ.
ಚಿಕನ್ ಪ್ರಿಯರಿಗೆ ಇದು ಖಂಡಿತವಾಗಿಯೂ ಶಾಕಿಂಗ್ ಸುದ್ದಿ. ಮುಂದಿನ ದಿನಗಳಲ್ಲಿ ಕೋಳಿ ಮಾಂಸದ ಬೆಲೆ ಎಷ್ಟು ಮಟ್ಟಕ್ಕೆ ಏರಬಹುದು ಎಂಬುದನ್ನು ಗಮನದಲ್ಲಿಟ್ಟು ನೋಡಬೇಕಾಗಿದೆ.
ಇದನ್ನು ನೋಡಿ : KUNIGAL | ರೈಲ್ವೆ ಸ್ಟೇಷನ್ ಜಫ್ತಿ ಮಾಡಿದ್ದಾರೂ ಯಾಕೆ..? – ಕಚೇರಿಯಲ್ಲಿದ್ದ ವಸ್ತುಗಳನ್ನು ಕೂಡ ಕೊಂಡೊಯ್ದರು




