Malemahadeshwara ಬೆಟ್ಟದಲ್ಲಿ (MM Hills) ಪಾದಯಾತ್ರೆ ವೇಳೆ ಭಕ್ತನ ಮೇಲೆ ದಾಳಿ ನಡೆಸಿದ ಚಿರತೆಯನ್ನು ಕರ್ನಾಟಕ ಅರಣ್ಯ ಇಲಾಖೆ ಸುರಕ್ಷಿತವಾಗಿ ಸೆರೆಹಿಡಿದಿದೆ.

Malemahadeshwara : ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡ ಭಕ್ತನ ಮೇಲೆ ದಾಳಿ ನಡೆಸಿದ ಚಿರತೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿದಿದೆ. ಈ ಕಾರ್ಯಾಚರಣೆಯಲ್ಲಿ ಡ್ರೋನ್ ಮೇಲ್ವಿಚಾರಣೆ ಮತ್ತು ಸ್ಥಳೀಯ ಮಟ್ಟದಲ್ಲಿ ತೀವ್ರ ಕಣ್ಗಾವಲು ನಿರ್ವಹಣೆಯಿಂದ ಚಿರತೆಯ ಚಲನವಲನ ಪತ್ತೆಹಚ್ಚಲಾಯಿತು.
ಅರಣ್ಯ ಇಲಾಖೆಯ ನೇತೃತ್ವದಲ್ಲಿ ಕಾರ್ಯಾಚರಣೆಗೆ 50ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು. ಪಶುವೈದ್ಯರಾದ ಆದರ್ಶ್ ನೇತೃತ್ವದಲ್ಲಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ಸು ಕಂಡುಬಂತು. ಸೆರೆ ಸಿಕ್ಕಿರುವ ಚಿರತೆ 2–3 ವರ್ಷದ ಗಂಡು ಎಂದು ಅಂದಾಜಿಸಲಾಗಿದೆ.
ಚಿರತೆಯನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ
ಚಿರತೆಯನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ. ಇದರಿಂದಾಗಿ ಪ್ರಾಣಿ ಸುರಕ್ಷಿತವಾಗಿದ್ದು, ಭವಿಷ್ಯದ ಅಪಾಯಗಳನ್ನು ತಪ್ಪಿಸಲು ಸಹಾಯವಾಗಲಿದೆ.
ಇದನ್ನು ಓದಿ : Honnavar ಸೂಳೆಮುರ್ಕಿಯಲ್ಲಿ ನೆಡೆದಿದೆ ಡಬಲ್ ಮರ್ಡರ್..!!
ದಾಳಿಯಿಂದ ಭಕ್ತನ ಕುಟುಂಬಕ್ಕೆ ಪರಿಹಾರ
ಚಿರತೆಯ ದಾಳಿಯಿಂದ ಮೃತಪಟ್ಟ ಭಕ್ತ ಪ್ರವೀಣ್ ಅವರ ಕುಟುಂಬಕ್ಕೆ ಉಸ್ತುವಾರಿ ಸಚಿವ ವೆಂಕಟೇಶ್ 5 ಲಕ್ಷ ರೂಪಾಯಿ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದ್ದಾರೆ.
ಚಿರತೆ ದಾಳಿಯ ನಂತರ, ಪಾದಯಾತ್ರೆಯ ವೇಳೆ ಭಕ್ತರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಪಾದಯಾತ್ರೆ ನಿಷೇಧಿಸಲಾಗಿದೆ. ಅಲ್ಲದೆ, ಕಾಲುದಾರಿ ಮತ್ತು ಮೆಟ್ಟಿಲು ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿ, ಹೋಂಗಾರ್ಡ್ಸ್ ಮತ್ತು ಸ್ಥಳೀಯ ತಂಡಗಳು ನಿಗಾ ಕಾಯುವಂತೆ ವ್ಯವಸ್ಥೆ ಮಾಡಲಾಗಿದೆ. ಮಲೆ ಮಹದೇಶ್ವರಸ್ವಾಮಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತಕ್ಕೆ ಇದಕ್ಕಾಗಿ ವೆಚ್ಚ ಭರಿಸುವಂತೆ ಪತ್ರ ನೀಡಲಾಗಿದೆ.
ಇದನ್ನು ನೋಡಿ : KUNIGAL | ರೈಲ್ವೆ ಸ್ಟೇಷನ್ ಜಫ್ತಿ ಮಾಡಿದ್ದಾರೂ ಯಾಕೆ..? – ಕಚೇರಿಯಲ್ಲಿದ್ದ ವಸ್ತುಗಳನ್ನು ಕೂಡ ಕೊಂಡೊಯ್ದರು




