Chamarajanagara : ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನನ್ನು ಕೊಂದ ಚಿರತೆ ಸೆರೆ ಮೃತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿತರಣೆ..

Chamarajanagara : ಮಲೆ ಮಹದೇಶ್ವರ ಬೆಟ್ಟಕ್ಕೆ ತಾಳು ಬೆಟ್ಟದಿಂದ ಪಾದಯಾತ್ರೆ ತೆರಳುತ್ತಿದ್ದ ಭಕ್ತನನ್ನು ಕೊಂದು ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕಿದೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದರಿಂದ ಭಕ್ತರಲ್ಲಿ ಭೀತಿ ಉಂಟಾಗಿತ್ತು. ಈ ಹಿನ್ನೆಲೆ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸತತ ನಿಗಾ ವಹಿಸಿ, ವಿಶೇಷ ಚಿರತೆ ಕಾರ್ಯಪಡೆಯನ್ನು ನಿಯೋಜಿಸಿದ್ದರು.
ಇದಲ್ಲದೆ ಡ್ರೋನ್ ಮೂಲಕವೂ ಕಣ್ಗಾವಲು ನಡೆಸಲಾಗಿತ್ತು..
ಇದನ್ನು ಓದಿ : Belagavi : ಮಕ್ಕಳಾಗಿಲ್ಲವೆಂದು ಕಾಟ ಕೊಟ್ಟ ಪತ್ನಿಯ ಹತ್ಯೆಗೈದ ಪಾಪಿಪತಿ.!

ಅರವಳಿಕೆ ನೀಡಿ ಚಿರತೆ ಸೆರೆ
ಸತತ ಕಾರ್ಯಾಚರಣೆ ಬಳಿಕ ಚಿರತೆಗೆ ಅರವಳಿಕೆ ನೀಡಿ ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ. ಕಾರ್ಯಾಚರಣೆಯಲ್ಲಿ ಪಶುವೈದ್ಯ ಆದರ್ಶ್ ಭಾಗವಹಿಸಿದ್ದು, ಸುಮಾರು 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಶ್ರಮವಹಿಸಿದ್ದರು.
ಸೆರೆಸಿಕ್ಕಿರುವುದು ಸುಮಾರು 2–3 ವರ್ಷದ ಗಂಡು ಚಿರತೆ ಎನ್ನಲಾಗಿದೆ. ಚಿರತೆಯನ್ನು ಮೈಸೂರು ಬಳಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಮೃತನ ಕುಟುಂಬಕ್ಕೆ ಪರಿಹಾರ
ಈ ದುರ್ಘಟನೆಯಲ್ಲಿ ಮೃತಪಟ್ಟ ಭಕ್ತನ ಕುಟುಂಬಕ್ಕೆ ಸರ್ಕಾರದ ವತಿಯಿಂದ ₹5 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಭಕ್ತರ ಸುರಕ್ಷತೆಗೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ನೋಡಿ : ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ ಕರ್ನಾಟಕ-ಕೇರಳ ಸರ್ಕಾರ!




