Hubballi : ಹುಬ್ಬಳ್ಳಿಯ ಪ್ರತಿಷ್ಠಿತ ಮೆಟ್ರೋ ಮಾಲ್ನಲ್ಲಿ ಭಾರೀ ಅಗ್ನಿ ಅವಘಡ 60ಕ್ಕೂ ಹೆಚ್ಚು ಅಂಗಡಿಗಳು ಹೊತ್ತಿಯುರಿದು ಭಾರೀ ನಷ್ಟ…

Hubballi ಜಿಲ್ಲೆಯ ಮರಾಠಗಲ್ಲಿಯಲ್ಲಿರುವ ಪ್ರತಿಷ್ಠಿತ ಮೆಟ್ರೋ ಮಾಲ್ (Metro Mall) ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 60ಕ್ಕೂ ಹೆಚ್ಚು ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ.
ಗುರುವಾರ (ಜ.22) ರಾತ್ರಿ ಕೆಲಸ ಮುಗಿಸಿ ಮಾಲ್ಗೆ ಬೀಗ ಹಾಕಲಾಗಿತ್ತು. ಆದರೆ ಮಧ್ಯರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ, ನಾಲ್ಕನೇ ಮಹಡಿಯಲ್ಲಿ ಇರುವ ಲೈಫ್ ಸ್ಟೈಲ್ ಶಾಪ್ನಲ್ಲಿ ಮೊದಲಿಗೆ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.
ಕ್ಷಣಗಳಲ್ಲಿ ಇಡೀ ಮಾಲ್ಗೆ ಬೆಂಕಿ
ಸ್ಥಳೀಯರು ಮಾಲ್ ಮಾಲೀಕರಿಗೆ ಮಾಹಿತಿ ನೀಡಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲೇ ಬೆಂಕಿಯ ಪ್ರಮಾಣ ಹೆಚ್ಚಾಗಿ, ಕ್ಷಣಾರ್ಧದಲ್ಲಿ ಇಡೀ ಮಾಲ್ಗೆ ವ್ಯಾಪಿಸಿದೆ. ಇದರಿಂದ ಮಾಲ್ನಲ್ಲಿದ್ದ ಅಂಗಡಿಗಳಿಗೆ ಭಾರೀ ಹಾನಿಯಾಗಿದೆ.
ಇದನ್ನು ಓದಿ : Belagavi : ಮಕ್ಕಳಾಗಿಲ್ಲವೆಂದು ಕಾಟ ಕೊಟ್ಟ ಪತ್ನಿಯ ಹತ್ಯೆಗೈದ ಪಾಪಿಪತಿ.!
ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸತತ ನಾಲ್ಕು ಗಂಟೆಗಳ ಕಾಲ ಹರಸಾಹಸಪಟ್ಟು ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದಾರೆ. ಅಗ್ನಿ ನಂದಿಸುವ ವೇಳೆ ಸಿಬ್ಬಂದಿಗೆ ದೊಡ್ಡ ಸವಾಲು ಎದುರಾಯಿತು.
ಶಾರ್ಟ್ ಸರ್ಕ್ಯೂಟ್ ಶಂಕೆ
ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಆವರಿಸಿದೆ ಎಂದು ಶಂಕಿಸಲಾಗಿದೆ.
ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಷ್ಟದ ಅಂದಾಜು ಹಾಗೂ ಅಗ್ನಿ ಅವಘಡದ ನಿಖರ ಕಾರಣ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ಸದನದಲ್ಲಿ ರಾಜ್ಯಪಾಲರ ವಿರುದ್ದ ಕೈ ನಾಯಕರ ಗದ್ದಲ- ತುಮಕೂರಿನಲ್ಲಿ ಪರಂ ಫಸ್ಟ್ ರಿಯಾಕ್ಷನ್




