Dansupalya Gang ನ ಹಂತಕನೊಬ್ಬನನ್ನು ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.

ಸುಮಾರು ಮೂರು ದಶಕಗಳ ಕಾಲ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್ನ ಹಂತಕನೊಬ್ಬನನ್ನು ಮಂಗಳೂರಿನ ಉರ್ವ ಠಾಣಾ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ..?
ಬಂಧಿತನನ್ನು ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ ಎಂದು ಗುರುತಿಸಲಾಗಿದೆ. 1997ರ ಅಕ್ಟೋಬರ್ 11ರಂದು ಮಂಗಳೂರಿನ ಉರ್ವ ಮಾರಿಗುಡಿ ಕ್ರಾಸ್ ಸಮೀಪದ ‘ಅನ್ವರ್ ಮಹಲ್’ ಎಂಬ ಮನೆಗೆ Dandupalya Gang ನುಗ್ಗಿತ್ತು.
ನಂತರ ಮನೆಯಲ್ಲಿದ್ದ ಲೂವಿಸ್ ಡಿಮೆಲ್ಲೋ (80) ಮತ್ತು ರಂಜಿತ್ ವೇಗಸ್ (19) ಎಂಬುವವರನ್ನು ಕ್ರೂರವಾಗಿ ಕೊಲೆ ಮಾಡಿತ್ತು. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದ ಗ್ಯಾಂಗ್ ಅಲ್ಲಿಂದ ಪರಾರಿಯಾಗಿತ್ತು.
ದಂಡುಪಾಳ್ಯ ಗ್ಯಾಂಗ್ನ ಕುಖ್ಯಾತ ಹಂತಕ ಅರೆಸ್ಟ್
ಇನ್ನು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಟು ಮಂದಿಯಲ್ಲಿ ಚಿಕ್ಕ ಹನುಮಂತಪ್ಪ ಮಾತ್ರ ಇದುವರೆಗೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಆರೋಪಿಯ ಪತ್ತೆಗೆ 2010ರಲ್ಲಿ ಮಂಗಳೂರಿನ JMFC 2ನೇ ನ್ಯಾಯಾಲಯ ಎಲ್ಪಿಸಿ (LPC) ವಾರೆಂಟ್ ಹೊರಡಿಸಿತ್ತು.
ಪೊಲೀಸರ ಕಣ್ಣಿಗೆ ಬೀಳದಂತೆ ಈತ ಕೆ. ಕೃಷ್ಣಪ್ಪ ಹಾಗೂ ಕೃಷ್ಣ ಎಂಬ ಹೆಸರನ್ನು ಬಳಸಿ ಗುರುತು ಬದಲಿಸಿ ಕೊಂಡು ಬದುಕುತ್ತಿದ್ದನು. ಅಂತಿಮವಾಗಿ ಉರ್ವ ಠಾಣಾ ಪೊಲೀಸರ ವಿಶೇಷ ತಂಡ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆ ಪ್ರದೇಶದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ.
ಇದನ್ನು ಓದಿ : Muda Case – ಜ.28ಕ್ಕೆ ಬಿ ರಿಪೋರ್ಟ್ ಪ್ರಶ್ನಿಸಿದ್ದ ಆದೇಶ ಮುಂದೂಡಿಕೆ
13 ಕೊಲೆ ಹಾಗೂ ದರೋಡೆ ಪ್ರಕರಣಗಳು ದಾಖಲು
ಬಂಧಿತ ಆರೋಪಿಯ ವಿರುದ್ಧ ರಾಜ್ಯದ ವಿವಿಧೆಡೆ ಸುಮಾರು 13 ಕೊಲೆ ಹಾಗೂದರೋಡೆ ಪ್ರಕರಣಗಳು ದಾಖಲಾಗಿವೆ. ಈ ಹಿಂದೆಯೇ ಹಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ದೋಷಿ ತೀರ್ಪು ಕೂಡ ಪ್ರಕಟವಾಗಿದ್ದರೂ, ಈತ ಕಾನೂನಿನ ಕೈಗೆ ಸಿಗದೆ ಪರಾರಿಯಾಗಿದ್ದ.
ಪೊಲೀಸರಿಗೆ ದೊಡ್ಡ ಯಶಸ್ಸು
ಸುಮಾರು 29 ವರ್ಷಗಳ ಹಿಂದಿನ ಗಂಭೀರ ಪ್ರಕರಣವನ್ನು ಯಶಸ್ವಿಯಾಗಿ ಬೆನ್ನಟ್ಟಿ ಆರೋಪಿಯನ್ನು ಬಂಧಿಸಿದ ಉರ್ವ ಠಾಣಾ ಪೊಲೀಸರ ಕಾರ್ಯಾಚರಣೆಯನ್ನು ಮಂಗಳೂರು ಪೊಲೀಸ್ ಕಮಿಷನರ್ ಶ್ಲಾಘಿಸಿದ್ದಾರೆ.
ಅಲ್ಲದೆ, ಈ ತಂಡಕ್ಕೆ ವಿಶೇಷ ಬಹುಮಾನ ನೀಡುವಂತೆ ರಾಜ್ಯ ಡಿಜಿ ಹಾಗೂ ಐಜಿಪಿಯವರಿಗೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದಾರೆ. ಈ ಕಾರ್ಯಾಚರಣೆ ಯು ಹಳೆಯ ಪ್ರಕರಣಗಳ ಬೆನ್ನತ್ತಿರುವ ಪೊಲೀಸರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.
ಇದನ್ನು ನೋಡಿ : ಜಾರ್ಖಂಡ್ನಲ್ಲಿ ತಲೆಗೆ 1 ಕೋಟಿ ಬಹುಮಾನ ಹೊಂದಿದ್ದ ಮಾವೋವಾದಿ ಸೇರಿ 15 ನಕ್ಸಲರ ಹತ್ಯೆ




