
Dulquer Salmaan : ಪ್ಯಾನ್ ಇಂಡಿಯಾ ಸ್ಟಾರ್ ನಟ ಹಾಗೂ ನಿರ್ಮಾಪಕರಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮನೆಗಳ ಮೇಲೆ ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಇಬ್ಬರ ವಿರುದ್ಧ ವಿದೇಶದಿಂದ ಅಕ್ರಮವಾಗಿ ವಾಹನಗಳನ್ನು ಆಮದು ಮಾಡಿ ಕೊಳ್ಳುವ ಮತ್ತು ತೆರಿಗೆ ವಂಚನೆ ಮಾಡುವ ಆರೋಪ ಕೇಳಿ ಬಂದಿದ್ದು, 30ಕ್ಕೂ ಹೆಚ್ಚು ಸ್ಥಳಗಳಲ್ಲಿ ತಪಾಸಣೆ ನಡೆಯುತ್ತಿದೆ.
ಕೇರಳದ ಕೊಚ್ಚಿಯ ತೇವರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಹಾಗೂ ಪನಂಪಿನ್ನಿಯಲ್ಲಿ ದುಲ್ಕರ್ ಸಲ್ಮಾನ್ ಮನೆಗಳಿಗೆ ಸೇರಿದಂತೆ, ಇವರಿಗೆ ಸಂಬಂಧಿಸಿದ ವಿದೇಶಿ ಕಾರುಗಳು ಮತ್ತು ಇತರೆ ವಸ್ತುಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ದಾಳಿಗೆ ‘ನುಮ್ಕೂರ್’ ಎಂಬ ಹೆಸರಿಡಲಾಗಿದೆ.
ಇನ್ನು ಪರಿಶೀಲನೆಗಳಲ್ಲಿ ತಿಳಿದುಬಂದಂತೆ, ಅಕ್ರಮವಾಗಿ ಕಾರುಗಳನ್ನು ಮೊದಲು ಹಿಮಾಚಲ ಪ್ರದೇಶ ದಲ್ಲಿ ನೋಂದಾಯಿಸಿ, ನಂತರ ಅವುಗಳನ್ನು ಭಾರತದಲ್ಲಿ ವಿವಿಧ ಕಡೆಗಳಿಗೆ ಸಾಗಿಸುವ ಮೂಲಕ, ಸಿನಿಮಾ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳಿಗೆ ಹೈಪ್ರೈಸಿಗೆ ಮಾರಾಟ ಮಾಡಲಾಗುತ್ತಿತ್ತು. ವಿಶೇಷವಾಗಿ ದುಲ್ಕರ್ ಮತ್ತು ಪೃಥ್ವಿರಾಜ್ ಅವರ ಸಂಗ್ರಹದಲ್ಲಿರುವ ವಿದೇಶಿ ಕಾರುಗಳಲ್ಲಿದೆ ಆಸ್ಟಿನ್ ಮಾರ್ಟಿನ್ ಸಹ.
ಅಧಿಕಾರಿಗಳು ವಂಚನೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸಲು ನೋಟಿಸ್ ನೀಡಿದ್ದು, ತನಿಖೆ ಇನ್ನೂ ಮುಂದುವರಿಯುತ್ತಿದ್ದು, ಮತ್ತಷ್ಟು ವಿವರಗಳು ಬಹಿರಂಗ ವಾಗಲಿದೆ.




