Bengaluru : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ನೀಡಿದ ಭಾಷಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಹೆಸರೇ ರಾಜ್ಯ ಸರ್ಕಾರ ಬದಲಾಯಿಸಿದ್ದು ಬಹಿರಂಗವಾಗಿದೆ.

Bengaluru : ಈ ವಿಚಾರವು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ರಾಜ್ಯಪಾಲರು ಪೂರ್ಣ ಭಾಷಣ ಓದದೆ, ಕೇವಲ ಕೊನೆಯ ಪ್ಯಾರಾಗಳನ್ನು ಮಾತ್ರ ಓದಿ ಅಧಿವೇಶನ ಮುಗಿಸಿರುವುದು ಕಾಂಗ್ರೆಸ್ನ ಆಕ್ರೋಶಕ್ಕೆ ಗುರಿಯಾದ ಘಟನೆ.
ಕೇಂದ್ರ ಯೋಜನೆಯ ಹೆಸರಿನಲ್ಲಿ ತಿದ್ದುಪಡಿ
ಸುದ್ದಿ ಪ್ರಕಾರ, ರಾಜ್ಯಪಾಲರಿಗೆ ನೀಡಿದ ಭಾಷಣದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಹೆಸರನ್ನು ರಾಜ್ಯ ಸರ್ಕಾರ ‘ವಿಬಿ ಗ್ರಾಮ್ ಜಿ’ ಎಂದು ಬದಲಿಸಿದೆ. ‘ರಾಮ್’ ಹೆಸರನ್ನು ಬಳಸದಿರುವ ಈ ತಿದ್ದುಪಡಿ ವಿಧಾನಸಭೆಯಲ್ಲಿ ದಾಖಲಾಗಿದ್ದು, ಅಧಿಕೃತ ಯೋಜನೆಯ ಹೆಸರನ್ನೇ ಬದಲಾಯಿಸಿದ್ದಾಗಿ ತಿಳಿದುಬಂದಿದೆ.

ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಸದಸ್ಯರು ಕಠಿಣ ಟಿಪ್ಪಣಿ ನೀಡಿದ್ದಾರೆ. ಅವರು ರಾಷ್ಟ್ರಗೀತೆಗೆ ಅವಮಾನ ಸಲ್ಲಿಸಿದ್ದಂತೆ ಆರೋಪ ಮಾಡಿದ್ದಾರೆ. ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ H.K. ಪಾಟೀಲ್ ಈ ಬಗ್ಗೆ ಸದನದಲ್ಲಿ ನಿರ್ಣಯ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿ : Ugram Manjuಗೆ ಮದುವೆ ಸಂಭ್ರಮ – ಅರಿಶಿಣ ಶಾಸ್ತ್ರದ ಫೋಟೋ ಇಲ್ಲಿದೆ!
ರಾಜ್ಯಪಾಲರಿಗೆ ಅಗೌರವ – ಬಿಜೆಪಿ ಕ್ರಮಕ್ಕೆ ಆಗ್ರಹ
ರಾಜ್ಯಪಾಲರು ನಿರ್ಗಮಿಸುವ ವೇಳೆ ಕಾಂಗ್ರೆಸ್ ಶಾಸಕರು ಅವರನ್ನು ಮುತ್ತಿಗೆ ಹಾಕಲು ಯತ್ನಿಸಿದ್ದು, BJP ಕಿಡಿಕಾರಿಸಿದೆ. ಈ ಕುರಿತು ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಲಿಖಿತ ದೂರು ಸಲ್ಲಿಸಲಾಗಿದೆ.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ, ಸ್ಪೀಕರ್ ಕಚೇರಿಗೆ ಭೇಟಿ ನೀಡಿ, ರಾಜ್ಯಪಾಲರನ್ನು ಅಡ್ಡಗಟ್ಟಿ, ತಳ್ಳಾಡಿ, ನೂಕುನುಗ್ಗಲು ಉಂಟು ಮಾಡಲಾಗಿದೆ ಎಂದು ದೂರಿದ್ದನ್ನು ಗಮನಕ್ಕೆ ತರುತ್ತಿದ್ದಾರೆ. ಶಾಸಕರು ಮತ್ತು MLC ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು BJP ಆಗ್ರಹಿಸಿದೆ.
ಇದನ್ನು ನೋಡಿ : ಜಂಟಿ ಅಧಿವೇಶನಲ್ಲಿ ಭಾಷಣ ಅರ್ಧಕ್ಕೆ ನಿಲ್ಲಿಸಿ ಹೊರಟ ರಾಜ್ಯಪಾಲ ಗೆಹ್ಲೋಟ್




