Gadag : ಗದಗ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಮೇಲಾಧಿಕಾರಿಗಳ ಕಿರುಕುಳ ಹಾಗೂ ವೇತನ ತಡೆಹಿಡಿದಿರುವುದಕ್ಕೆ ಬೇಸತ್ತು ರಾಷ್ಟ್ರಪತಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

Gadag : ಮಾನಸಿಕ ಹಿಂಸೆ ಮತ್ತು ಆರ್ಥಿಕ ಸಂಕಷ್ಟದಿಂದ ಜೀವನ ನಿರ್ವಹಣೆ ಕಷ್ಟವಾಗಿರುವುದಾಗಿ ಅವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನೌಕರರ ಮೇಲೆ ಅಧಿಕಾರಿಗಳ ಕಿರುಕುಳ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಕೆಲ ಅಧಿಕಾರಿಗಳು ತಮ್ಮ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡು ಅನಗತ್ಯ ಒತ್ತಡ, ಮಾನಸಿಕ ಹಿಂಸೆ, ಬೆದರಿಕೆ ಮತ್ತು ಅವಮಾನಕರ ವರ್ತನೆ ತೋರುತ್ತಿರುವ ಆರೋಪಗಳು ಹೆಚ್ಚಾಗಿವೆ. ಇದೇ ಹಿನ್ನೆಲೆಯಲ್ಲೇ ಗದಗ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಡಂಬಳ ಗ್ರಾಮದ ಲೆಕ್ಕಾಧಿಕಾರಿಯ ಅಳಲು
ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ಕುರಹಟ್ಟಿ, ಮೇಲಾಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದ್ದರೂ, ಮೇಲಿಂದ ಮೇಲೆ ನೋಟಿಸ್ ನೀಡಲಾಗಿದ್ದು, ಕಳೆದ ಎರಡು ತಿಂಗಳಿಂದ ವೇತನ ತಡೆಹಿಡಿಯಲಾಗಿದೆ ಎಂದು ದೂರಿದ್ದಾರೆ.
ಇದನ್ನು ಓದಿ : Pavithra Gowdaಗೆ ಬಿಗ್ ಶಾಕ್ ಕೊಟ್ಟ ಕರ್ನಾಟಕ ಹೈಕೋರ್ಟ್..!
ಯೋಗೇಶ್ ಅವರಿಗೆ ಅನಾರೋಗ್ಯ ಪೀಡಿತ ತಾಯಿ ಇದ್ದು, ಅವರ ಆರೈಕೆಯ ಜವಾಬ್ದಾರಿ ಸಂಪೂರ್ಣವಾಗಿ ತಮ್ಮ ಮೇಲಿದೆ. ಇದಲ್ಲದೆ ತಾವೂ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಜೀವನ ಸಾಗಿಸುವುದು ಅತೀವ ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ. ಈ ಕಾರಣಗಳಿಂದ ಮಾನಸಿಕ ಹಾಗೂ ದೈಹಿಕ ಸಂಕಟ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ರಾಷ್ಟ್ರಪತಿಗೆ ಬರೆದ ಪತ್ರದಲ್ಲೇನಿದೆ?
ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಯೋಗೇಶ್, “ಪೂರ್ಣ ಶ್ರಮದಿಂದ ಕೆಲಸ ಮಾಡಿದರೂ ಸರಿಯಾದ ಸಂಬಳ ಸಿಗುತ್ತಿಲ್ಲ. ವೃದ್ಧ ತಾಯಿಯನ್ನು ಪೋಷಿಸುವ ಹೊಣೆ ನನ್ನ ಮೇಲಿದೆ. ಸರ್ಕಾರದ ನೌಕರನಾಗಿದ್ದರೂ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಸಂಕಟ ಅನುಭವಿಸುತ್ತಿದ್ದೇನೆ. ಆದ್ದರಿಂದ ದಯವಿಟ್ಟು ನನಗೆ ದಯಾಮರಣ ನೀಡಿ ಈ ದುಃಸ್ಥಿತಿಯಿಂದ ಮುಕ್ತಿಗೊಳಿಸಬೇಕು” ಎಂದು ಮನವಿ ಮಾಡಿದ್ದಾರೆ.
ಇದನ್ನು ನೋಡಿ : ರಾಷ್ಟ್ರೀಯ ಹೆದ್ದಾರಿ – 44 ರಲ್ಲಿ ಆಕ್ಸಿಡೆಂ 11 ಪ್ರಯಾಣಿಕರಿಗೆ ಗಾಯ, ಓರ್ವ ಸಾ*




