ಮೈಸೂರಿನ ಟಿ.ನರಸೀಪುರ RFO ಕಾಂತರಾಜ್ ಚೌಹಾಣ್ ಶವವಾಗಿ ಪತ್ತೆ.

ಮೈಸೂರು ನಗದರ ಖಾಸಗಿ ಹೋಟೆಲ್ವೊಂದರಲ್ಲಿ ಆರ್ಎಫ್ಒ ಶವವಾಗಿ ಪತ್ತೆ ಆಗಿರುವಂತಹ ಘಟನೆ ಮೈಸೂರು ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್ನಲ್ಲಿ ನಡೆದಿದೆ. ಟಿ ನರಸೀಪುರ RFO ಕಾಂತರಾಜ್ ಚೌಹಾಣ್ ಶವವಾಗಿ ಪತ್ತೆ ಯಾಗಿದ್ದಾರೆ. ಸದ್ಯ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಘಟನಾ ಸ್ಥಳಕ್ಕೆ ಲಷ್ಕರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನು ನೋಡಿ : BIG BOSS WINNER GILLI | ಹಳ್ಳಿ ಹೈದನಿಗೆ ಬಿಗ್ ಬಾಸ್ ಪಟ್ಟ ರೆಕಾರ್ಡ್ ಬ್ರೇಕ್ ಮಾಡಿದ ಗಿಲ್ಲಿ
RFO ಕಾಂತರಾಜ್ ಚೌಹಾಣ್ ಶವವಾಗಿ ಪತ್ತೆ
ಸ್ನೇಹಿತ ಮಲ್ಲನಗೌಡ ಪಾಟೀಲ್ ಜೊತೆಗೆ ನಿನ್ನೆ ಮಧ್ಯಾಹ್ನ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಕಾಂತರಾಜ್ ರೂಮ್ ಬುಕ್ ಮಾಡಿದ್ದರು. ಆದರೆ ಏಕಾಏಕಿ ಮೃತಪಟ್ಟಿದ್ದಾರೆ. ಇನ್ನು ಇತ್ತ ಕಾಂತರಾಜ್ ಸ್ನೇಹಿತ ಮಲ್ಲನಗೌಡ ಪಾಟೀಲ್ ನಾಪತ್ತೆ ಯಾಗಿದ್ದಾರೆ.
15 ದಿನಗಳ ಹಿಂದಷ್ಟೇ ವರ್ಗಾವಣೆ
ಕಾಂತರಾಜ್ ಚೌಹಾಣ್ 15 ದಿನಗಳ ಹಿಂದಷ್ಟೇ ನರಸೀಪುರಕ್ಕೆ ಆರ್ಎಫ್ಒ ಆಗಿ ವರ್ಗಾವಣೆಗೊಂಡಿದ್ದರು. ಈಗ ಅವರು ಶವ ಪತ್ತೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನು ಓದಿ : ರಾಜ್ಯದ ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ಬಿಡುಗಡೆ




