Big Boss ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟನಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿನಂದನೆ ತಿಳಿಸಿದ್ದಾರೆ.

Big Boss ಕನ್ನಡ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟರಾಜ್ (ಶ್ರೀ ನಟರಾಜ್) ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಎಕ್ಸ್ನಲ್ಲಿ ಹೆಚ್ಡಿಕೆ ಅಭಿನಂದನಾ ಸಂದೇಶ
ಸಾಮಾಜಿಕ ಜಾಲತಾಣ ಎಕ್ಸ್ (Twitter) ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೆಚ್ಡಿಕೆ,
“ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ ಹೃದಯಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.
ಇದನ್ನು ಓದಿ : `ದೊಡ್ಮನೆ’ ದೊರೆಯಾದ ದಡದಪುರದ ಹೈದ – ಗಿಲ್ಲಿ ಗೆಲುವಿಗೆ ಸಂಭ್ರಮಿಸಿದ ಕರುನಾಡು
ಹಳ್ಳಿಯ ರೈತನ ಮಗನಿಗೆ ರಾಷ್ಟ್ರಮಟ್ಟದ ಗುರುತು
ಹಳ್ಳಿಯ ರೈತನ ಮಗನಾಗಿ ಹುಟ್ಟಿ, ಕನ್ನಡಿಗರ ಮನ ಗೆದ್ದಿರುವ ಗಿಲ್ಲಿ ನಟರಾಜ್ಗೆ ಇನ್ನಷ್ಟು ಕೀರ್ತಿ, ಹೆಸರು ದೊರಕಲಿ ಎಂದು ಹೆಚ್ಡಿಕೆ ಶುಭ ಹಾರೈಸಿದ್ದಾರೆ. ಜೊತೆಗೆ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆ ತಿಳಿಸಿದ್ದಾರೆ.
ಗ್ರಾಮೀಣ ಪ್ರತಿಭೆಗೆ ಸಿಕ್ಕ ದೊಡ್ಡ ವೇದಿಕೆ
ಈ ಗೆಲುವಿನೊಂದಿಗೆ ಗಿಲ್ಲಿ ನಟರಾಜ್ ಅವರು ಗ್ರಾಮೀಣ ಪ್ರತಿಭೆಗಳಿಗೂ ರಾಷ್ಟ್ರಮಟ್ಟದ ವೇದಿಕೆಯಲ್ಲಿ ಗುರುತು ಪಡೆಯಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದನ್ನು ಓದಿ : `ದೊಡ್ಮನೆ’ ದೊರೆಯಾದ ದಡದಪುರದ ಹೈದ – ಗಿಲ್ಲಿ ಗೆಲುವಿಗೆ ಸಂಭ್ರಮಿಸಿದ ಕರುನಾಡು




