ಬಿಗ್ ಬಾಸ್ ಸೀಸನ್- 12ರ ಕಿರೀಟ ಮುಡಿಗೇರಿಸಿಕೊಂಡ Gilli.

ತನ್ನ ಕಾಮಿಡಿ ಹಾಗೂ ಪಂಚಿಂಗ್ ಡೈಲಾಗ್ ಮೂಲಕವೇ ಇಡೀ ಕರುನಾಡ ಜನರ ಮನಗೆದ್ದ ಗಿಲ್ಲಿ, ಬಿಗ್ ಬಾಸ್ ಸೀಸನ್ – 12 ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಕಾಮಿಡಿ ಕಿಲಾಡಿಗಳಲ್ಲಿ ನಗುವಿನ ಕಿಕ್ ಕೊಟ್ಟು, ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಗಿಲ್ಲಿ. ಇದೀಗ ಮತ್ತೊಂದು ಮೈಲಿಗಲ್ಲು ಸಾದಿಸಿದ್ದಾರೆ.

ಐತಿಹಾಸಿಕ ಜಯ ಕಂಡ ಗಿಲ್ಲಿ ನಟ
ಇಡೀ ಕರುನಾಡೆ ನಟ Gilli ಕಾಮಿಡಿ ಮನ ಸೋತಿದ್ದರು. ಇತ್ತ ನಾಡಿನೆಲ್ಲೆಡೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಗಿಲ್ಲಿ ಅನ್ನೋದನ್ನು ಸಾರಿ ಹೇಳ್ತಿದ್ರು. ಅತ್ತ ಶಿವಣ್ಣ ಮತ್ತು ಸುದೀಪ್ ಅವರು ಕೂಡ ಗಿಲ್ಲಿಯೇ ವಿನ್ನರ್ ಆಗಬೇಕೆಂದ ಬಯಸಿದ್ರು. ಇಡೀ ನಾಡಿನ ಜನತೆ ಕೂಡ ಗಿಲ್ಲಿಯ ಪರವಾಗಿ ಓಟ್ ಮಾಡಿದ್ರು. ಒಟ್ಟಿನಲ್ಲಿ ರಕ್ಷಿತಾ ಮತ್ತು ಅಶ್ವಿನಿಗೌಡ ಫುಲ್ ಫೈಟ್ ನೀಡಿ ಈ ಸೀಸನ್ ನ ವಿನ್ನರ್ ಆಗಿದ್ದಾರೆ.

ಟಾಪ್ ಮೂರಲ್ಲಿ ಗಿಲ್ಲಿ, ರಕ್ಷಿತಾ ಮತ್ತು ಅಶ್ವಿನಿಗೌಡ
ಇನ್ನು 111 ದಿನಗಳ ಆಟದಲ್ಲಿ ಬಿಗ್ ಬಾಸ್ ಮನೆಗೆ 24 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆದರೆ, ಕೊನೆಯದಾಗಿ 6 ಮಂದಿ ಫೈನಲ್ಗೆ ಬಂದಿದ್ದರು. ಗಿಲ್ಲಿ ನಟ, ಕಾವ್ಯ, ರಕ್ಷಿತಾ, ರಘು, ಅಶ್ವಿನಿ ಗೌಡ ಮತ್ತು ಧನುಶ್ ಅವರು ಟಾಪ್ 6 ಕಂಟೆಸ್ಟಂಟ್ ಗಳಾಗಿದ್ದರು.
ಇವರಲ್ಲಿ ಯಾರಿಗೆ ಬಿಗ್ ಬಾಸ್ ಕಿರೀಟ್ ಸಿಗಲಿಗೆ ಎಂಬ ಕುತೂಹಲ ವೀಕ್ಷಕರಲ್ಲಿತ್ತು. ಈ ಪೈಕಿ ಧನುಷ್ 5ನೇ ರನ್ನರ್ ಅಪ್ ಆದರು. ಬಳಿಕ ಕಾವ್ಯ ಮತ್ತು ರಘು ಕ್ರಮವಾಗಿ 3 ಹಾಗೂ 4ನೇ ರನ್ನರ್ ಅಪ್ ಸ್ಥಾನ ಪಡೆದರು. ಟಾಪ್ ಮೂರಲ್ಲಿ ಗಿಲ್ಲಿ, ರಕ್ಷಿತಾ ಮತ್ತು ಅಶ್ವಿನಿಗೌಡ ಇದ್ದರು.

ಹಾಸ್ಯ ಮಾಡುತ್ತಲೇ ಎಲ್ಲರ ಮನಗೆದ್ದ ಗಿಲ್ಲಿ
ಈ ಪೈಕಿ ಭಾರೀ ನಿರೀಕ್ಷೆ ಮೂಡಿಸಿದ್ದ ಅಶ್ವಿನಿಗೌಡ ಅವರು 2ನೇ ರನ್ನರ್ ಅಪ್ ಆದ್ರು. ಕೊನೆಯದಾಗಿ ಗಿಲ್ಲಿ ನಟ ಮತ್ತು ರಕ್ಷಿತಾ ಮಧ್ಯೆ ಯಾರು ಅನ್ನೋ ಕುತೂಹಲ ಉಂಟಾಗಿತ್ತು. ಸುದೀಪ್ ಅವರು ಗಿಲ್ಲಿ ಅವರ ಕೈ ಮೇಲೆತ್ತುವ ಮೂಲಕ ಈ ಬಾರಿ ಬಿಗ್ ಬಾಸ್ ವಿಜೇತರನ್ನು ಘೋಷಿಸಿದರು.
ಹಾಸ್ಯ ಮಾಡುತ್ತಲೇ ಎಲ್ಲರ ಮನಗೆದ್ದ ಗಿಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿ ದ್ದಾರೆ. ಅಂತೆಯೇ ಅವರಿಗೆ ದಾಖಲೆಯ ಮತಗಳೂ ಹರಿದುಬಂದಿದ್ದವು. ಫಿನಾಲೆ ಹಿನ್ನೆಲೆಯಲ್ಲಿ ಸ್ಟುಡಿಯೋ ಬಳಿ ಗಿಲ್ಲಿ ಅಭಿಮಾನಿಗಳು ಆಗಮಿಸಿ, ಗೆಲುವನ್ನು ಸಂಭ್ರಮಿಸಿದರು.
ಇದನ್ನು ಓದಿ : Dina Bhavishya : ದಿನ ಭವಿಷ್ಯ 19 ಜನವರಿ 2026

ಭರ್ಜರಿ ಗಿಫ್ಟ್ ಘೋಷಣೆ
ಗಿಲ್ಲಿ ನಟನ ಆಟ ಮೆಚ್ಚಿದ ಕಿಚ್ಚ ಸುದೀಪ ಅವರೂ ಕೂಡ ಭರ್ಜರಿ ಗಿಫ್ಟ್ ಘೋಷಣೆ ಮಾಡಿದ್ದಾರೆ. ವೈಯಕ್ತಿಕವಾಗಿ ಗಿಲ್ಲಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ವೇದಿಕೆಯಲ್ಲೇ ಅನೌನ್ಸ್ ಮಾಡಿದ್ರು. ಇನ್ನು ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ 25 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.

ಹೊಸ ದಾಖಲೆ
ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಸದ್ದು ಮಾಡಿತು. ರಾಜ್ಯದಲ್ಲಿ ಅಷ್ಟೇ ಅಲ್ಲ, ಪಕ್ಕದ ರಾಜ್ಯ ಹಾಗೂ ವಿದೇಶಗಳಲ್ಲೂ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂತೆಯೇ ಈ ಬಾರಿ ದಾಖಲೆಯ ವೋಟಿಂಗ್ ಕೂಡಾ ಆಗಿದೆ. ಬಿಗ್ ಬಾಸ್ ವಿಜೇತ ಗಿಲ್ಲಿ ನಟ 37 ಕೋಟಿಗೂ ಅಧಿಕ ಮತ ಪಡೆದಿದ್ದಾರೆ.
ಕಳೆದ ‘ಬಿಗ್ ಬಾಸ್ ‘ಸೀಸನ್ 11’ರ ಟ್ರೋಫಿಯನ್ನು ಗೆದ್ದಿದ್ದ ಹಳ್ಳಿ ಹೈದ ಹನುಮಂತು 5,23,89,318 ಮತಗಳನ್ನು ಪಡೆದುಕೊಂಡಿದ್ದರು. ಈ ಬಾರಿ ಹೊಸ ದಾಖಲೆ ನಿರ್ಮಾಣವಾಗಿದೆ. ನಟ ಗಿಲ್ಲಿ 46 ಕೋಟಿ ಮತ ಪಡೆದಿದ್ದು, ಬಿಗ್ ಬಾಸ್ ಸೀಸನ್ ನಲ್ಲಿಯೇ ಇದೊಂದು ಹೊಸ ದಾಖಲೆಯಾಗಿದೆ.

ಗಿಲ್ಲಿಗೆ ಫುಲ್ ಸಪೋರ್ಟ್
ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್ ಸೀಸನ್ – 12 ರಲ್ಲಿ ಎಲ್ಲರ ಕುತೂಹಲ ಮೂಡಿಸಿತ್ತು. ರಕ್ಷಿತಾ, ಅಶ್ವಿನಿಗೌಡ ಹಾಗೂ ಗಿಲ್ಲಿ ಇವರಲ್ಲಿ ಯಾರು ವಿನ್ನರ್ ಆಗ್ತಾರೆ ಅಂತ. ಕೊನೆಗೂ ಇಡೀ ಕರುನಾಡು ಬಡವರ ಮಕ್ಕಳು ಬೆಳಿಬೇಕು ಅಂತ ನಟ ಗಿಲ್ಲಿಗೆ ಫುಲ್ ಸಪೋರ್ಟ್ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ – 12ರಲ್ಲಿ ಅತೀ ಹೆಚ್ಚು ಓಟ್ ಮಾಡುವ ಮೂಲಕ ಹೊಸ ದಾಖಲೆಯನ್ನೇ ಸೃಷ್ಠಿ ಮಾಡಿದ್ದಾರೆ ನಟ. ನಟ ಗಿಲ್ಲಿಗೆ ಅದೃಷ್ಟ ದೇವತೆ ಒಲಿದಿದ್ದು, ಮುಂದಿನ ದಿನಗಳಲ್ಲಿ ಗಿಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲ್ಲಿ ಅನ್ನುವುದು ಇಡೀ ಕರುನಾಡ ಜನರ ಆಸೆಯಾಗಿದೆ.

ಇದನ್ನು ನೋಡಿ : ತುಮಕೂರಿನಲ್ಲಿ ಜಬರ್ದಸ್ತ್ BOXING- ಇಂದಿನ ಮ್ಯಾಚ್ ಹೇಗಿತ್ತು ಗೊತ್ತಾ..?




