
ಗೂಗಲ್ ಪ್ರತಿ ಜಿಮೇಲ್ ಬಳಕೆದಾರರಿಗೆ 15GB ಸ್ಟೋರೇಜ್ ನೀಡುತ್ತದೆ. ಆದರೆ ಪ್ರೋಮೋಶನಲ್ ಮತ್ತು ಮಾರ್ಕೆಟಿಂಗ್ ಇಮೇಲ್ಗಳಿಂದ ಈ ಸ್ಟೋರೇಜ್ ತುಂಬಿ ಹೋಗುತ್ತದೆ. ಹೀಗಾಗಿ ಅನಗತ್ಯ ಇಮೇಲ್ಗಳನ್ನು ಡಿಲೀಟ್ ಮಾಡುವ ಫೀಚರ್ ಬಹಳ ಉಪಯುಕ್ತವಾಗಿದೆ.
ಇದನ್ನು ಮಾಡುವುದು ಬಹಳ ಸರಳ:
- ಜಿಮೇಲ್ ಖಾತೆಗೆ ಲಾಗಿನ್ ಆಗಿ.
- ಇಂಬಾಕ್ಸ್ ತೆರೆದು ಟಾಪ್ನಲ್ಲಿ ಇರುವ ಚೆಕ್ಬಾಕ್ಸ್ ಕ್ಲಿಕ್ ಮಾಡಿ. ಇದು ಮೊದಲ ಪೇಜ್ನ ಎಲ್ಲಾ ಇಮೇಲ್ಗಳನ್ನು ಆಯ್ಕೆ ಮಾಡುತ್ತದೆ.
- “Select all X conversations in Inbox” ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದರಿಂದ ಇಂಬಾಕ್ಸ್ನಲ್ಲಿನ ಎಲ್ಲಾ ಇಮೇಲ್ಗಳು ಆಯ್ಕೆ ಆಗುತ್ತವೆ.
- ನಂತರ “Delete” ಬಟನ್ ಕ್ಲಿಕ್ ಮಾಡಿ. ನಿಮ್ಮ ಎಲ್ಲಾ ಇಮೇಲ್ಗಳು ಒಮ್ಮೆಲೆ ಅಳಿಸಲಾಗುತ್ತವೆ.

ನಿರ್ದಿಷ್ಟ ಕೆಟಗರಿ ಅಥವಾ ವ್ಯಕ್ತಿಯ ಇಮೇಲ್ಗಳನ್ನು ಡಿಲೀಟ್ ಮಾಡುವುದು:
- Promotion, Social Category ಅಥವಾ ನಿರ್ದಿಷ್ಟ ವ್ಯಕ್ತಿಯ ಇಮೇಲ್ಗಳನ್ನು ಆಯ್ಕೆ ಮಾಡಿ.
- ಡಿಲೀಟ್ ಬಟನ್ ಕ್ಲಿಕ್ ಮಾಡಿ.
- ನೀವು ತಪ್ಪಾಗಿ ಅಳಿಸಿದ ಇಮೇಲ್ಗಳು 30 ದಿನಗಳಲ್ಲಿ ರಿಕವರಿ ಮಾಡಿಕೊಳ್ಳಬಹುದು.
ಈ ವಿಧಾನದಿಂದ ನಿಮ್ಮ ಜಿಮೇಲ್ ಇಂಬಾಕ್ಸ್ ಸ್ವಚ್ಛವಾಗುತ್ತದೆ ಮತ್ತು ಸ್ಟೋರೇಜ್ ಖಾಲಿಯಾಗುತ್ತದೆ.




