Belagavi ಜಿಲ್ಲೆಯ ಅಥಣಿಯಲ್ಲಿ ‘ಲವ್ ಜಿಹಾದ್’ ಸಂಬಂಧಿಸಿದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ.

Belagavi : ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ಶಾಹಿಲ್ ಎಂಬಾತನನ್ನು ಅಥಣಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಕಳೆದ ವಾರ ಅಥಣಿಯಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಪರಾರಿಯಾಗಿದ್ದ ಆರೋಪಿ ಶಾಹಿಲ್ನನ್ನು ಪತ್ತೆಹಚ್ಚಲು ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ಪರಿಣಾಮ, ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಶಾಹಿಲ್ ತನ್ನ ಸಂಬಂಧಿಯೊಬ್ಬಳ ಮೂಲಕ ಅಪ್ರಾಪ್ತ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ. ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ, ಹಲವು ಬಾರಿ ಹೋಟೆಲ್ಗಳಿಗೆ ಕರೆದುಕೊಂಡು ಹೋಗಿ ನಂಬಿಕೆ ಗಳಿಸಿದ್ದಾನೆ ಎನ್ನಲಾಗಿದೆ. ನಂತರ ಬಾಲಕಿಯೊಂದಿಗೆ ಒಬ್ಬಂಟಿಯಾಗಿ ಸುತ್ತಾಡಲು ಆರಂಭಿಸಿದ್ದಾನೆ.
ಇದನ್ನು ಓದಿ : Bidar|ಕಟ್ಟಡದ ಮೇಲಿಂದ ಬಿದ್ದು ಯುವಕ ದಾರುಣ ಸಾವು

ಮತಾಂತರಕ್ಕೆ ಒತ್ತಡ ಮತ್ತು ‘ಮೈಂಡ್ ವಾಷ್’ ಆರೋಪ
ಬಾಲಕಿಗೆ ಕ್ರಮೇಣ ಮಾನಸಿಕ ಪ್ರಭಾವ ಬೀರುತ್ತಾ, ಮುಂದೆ ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ ಎಂಬ ವಿಚಾರಗಳನ್ನು ಹೇಳಿ ಮೈಂಡ್ ವಾಷ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಿಂದೂ ಧರ್ಮ ತ್ಯಜಿಸಿ ಇಸ್ಲಾಂ ಸ್ವೀಕರಿಸಿದರೆ ಮದುವೆಯಾಗುತ್ತೇನೆ ಎಂದು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಜನವರಿ 28ರಂದು ಬಾಲಕಿಗೆ 18 ವರ್ಷ ತುಂಬಲಿರುವ ಹಿನ್ನೆಲೆ, ನಂತರ ಮದುವೆ ಮಾಡಿಕೊಳ್ಳುವ ಉದ್ದೇಶದಿಂದಲೇ ಶಾಹಿಲ್ ಬಾಲಕಿಯನ್ನು ಅಪಹರಿಸಿದ್ದಾನೆ ಎನ್ನಲಾಗಿದೆ. ಬಾಲಕಿ ಮನೆಗೆ ಮರಳದ ಕಾರಣ ಆಕೆಯ ತಾಯಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಪೊಲೀಸ್ ಕಾರ್ಯಾಚರಣೆ ಯಶಸ್ವಿ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಥಣಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯನ್ನು ರಕ್ಷಿಸಿ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ಅಭಿವೃದ್ಧಿಗೆ ಕುಮಾರಸ್ವಾಮಿ ನೆರವು ಪಡೆದಿಲ್ವಾ ಶಿವಲಿಂಗೇಗೌಡಗೆ ಸವಾಲ್ ಹಾಕಿದ ರೇವಣ್ಣ




