Gilli ಹೆಸರಲ್ಲಿ ಮತ್ತೊಂದು ದಾಖಲೆ.

ಬಿಗ್ಬಾಸ್ ಕನ್ನಡ ಈ ಸೀಸನ್ನ ಗಿಲ್ಲಿ ನಟ ದಿನದಿಂದ ದಿನಕ್ಕೆ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೇ ಇದ್ದಾರೆ. ನಾಳೆ ನಡೆಯಲಿರುವ ಬಿಗ್ಬಾಸ್ ಫಿನಾಲೆಯಲ್ಲಿ ಇವರೇ ವಿಜೇತರಾಗುತ್ತಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದರೂ, ಅಂತಿಮ ತೀರ್ಪು ಏನಾಗಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಟ್ರೋಫಿ ಗೆಲ್ತಾರಾ ಗಿಲ್ಲಿ..?
Gilli ಈ ಬಾರಿ ಬಿಗ್ಬಾಸ್ ಟ್ರೋಫಿ ಗೆಲ್ಲುತ್ತಾರೋ ಇಲ್ಲವೋ ಎಂಬುದು ಬೇರೆಯ ವಿಚಾರ. ಆದರೆ ಈಗಾಗಲೇ ಅವರು ಅಭಿಮಾನಿಗಳ ಹೃದಯವನ್ನು ಸಂಪೂರ್ಣವಾಗಿ ಗೆದ್ದಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ ನಂತರ ಅವರಿಗೆ ಸಾಲು ಸಾಲು ಅವಕಾಶಗಳು ದೊರೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮಿಲಿಯನ್ಗಟ್ಟಲೆ ಫಾಲೋವರ್ಸ್
ಈಗಾಗಲೇ ತಮ್ಮ ವೈಯಕ್ತಿಕ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಿಲಿಯನ್ಗಟ್ಟಲೆ ಫಾಲೋವರ್ಸ್ ಗಳಿಸಿ ದಾಖಲೆ ಬರೆದಿರುವ ಗಿಲ್ಲಿ, ಇದೀಗ ಬಿಗ್ಬಾಸ್ ಸಂಬಂಧಿಸಿದ ಪ್ರೊಮೋಗಳ ಮೂಲಕವೂ ಹೊಸ ದಾಖಲೆ ಸೃಞ್ಟಿಸಿದ್ದಾರೆ. ಗಿಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕೆ ಕಲರ್ಸ್ ವಾಹಿನಿಯ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟವಾದ ಮೂರು ಪ್ರೊಮೋಗಳಿಗೆ ಒಟ್ಟು 10 ಲಕ್ಷಕ್ಕೂ ಅಧಿಕ ಲೈಕ್ಸ್ ಲಭಿಸಿರುವುದು ದಾಖಲೆಯೆಂದು ಹೇಳಲಾಗುತ್ತಿದೆ.
ವಿಶೇಷ ದಾಖಲೆ
ಕಲರ್ಸ್ ವಾಹಿನಿ ಹಾಗೂ ಜಿಯೋಸ್ಟಾರ್ ವೇದಿಕೆಗಳಲ್ಲಿ ಬಿಗ್ಬಾಸ್ ಸಂಬಂಧಿಸಿದ ಅನೇಕ ಪ್ರೊಮೋಗಳು ಪ್ರಸಾರ ವಾಗುತ್ತಿರುತ್ತವೆ. ಅವುಗಳಲ್ಲಿ ಗಿಲ್ಲಿ ನಟ ಕಾಣಿಸಿಕೊಂಡಿರುವ ಹಲವಾರು ಪ್ರೊಮೋಗಳು ಈಗಾಗಲೇ ಜನಪ್ರಿಯವಾಗಿದ್ದು, ಮೂರು ಪ್ರತ್ಯೇಕ ಪ್ರೊಮೋಗಳಿಗೆ ತಲಾ ಒಂದು ಮಿಲಿಯನ್ಗೂ ಅಧಿಕ ಲೈಕ್ಸ್ ಬಂದಿರುವುದು ವಿಶೇಷ ದಾಖಲೆಯಾಗಿದೆ.
ಇದನ್ನು ಓದಿ : ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಉದ್ಯೋಗವಕಾಶ – 10th ಪಾಸಾಗಿದ್ರೆ ಸಾಕು!

ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಲೈಕ್ಸ್
ಮೊದಲನೆಯದಾಗಿ, ಗಿಲ್ಲಿ ನಟ ಸುದೀಪ್ ಅವರನ್ನು ಇಮಿಟೇಟ್ ಮಾಡಿದ್ದ ಪ್ರೊಮೋ 10 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿತ್ತು.
ಬಳಿಕ ಫ್ಯಾಮಿಲಿ ರೌಂಡ್ನಲ್ಲಿ ಗಿಲ್ಲಿ ತಂದೆ-ತಾಯಿ ಬಿಗ್ಬಾಸ್ ಮನೆಗೆ ಪ್ರವೇಶಿಸಿದ ಕ್ಷಣಗಳ ಪ್ರೊಮೋ ಕೂಡ 1 ಮಿಲಿಯನ್ ಲೈಕ್ಸ್ ಗಳಿಸಿತ್ತು. ಇತ್ತೀಚೆಗೆ ನಡೆದ ಅಭಿಮಾನಿ ಭೇಟಿ ಕಾರ್ಯಕ್ರಮದ ವೇಳೆ ಗಿಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ಪ್ರೊಮೋ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ.
ಈ ಎಲ್ಲಾ ಬೆಳವಣಿಗೆಗಳು ಗಿಲ್ಲಿ ನಟನಿಗೆ ಇರುವ ಅಪಾರ ಅಭಿಮಾನ ಬಳಗ ಮತ್ತು ಅವರ ಕ್ರೇಜ್ಗೆ ಸ್ಪಷ್ಟ ಸಾಕ್ಷಿಯಾಗಿದೆ. ಇದೀಗ ಎಲ್ಲರ ಗಮನ ಬಿಗ್ಬಾಸ್ ಫಿನಾಲೆ ಮೇಲಿದ್ದು, ಗಿಲ್ಲಿ ನಟ ಈ ದಾಖಲೆಗಳಿಗೆ ಕಿರೀಟವಾಗಿ ಟ್ರೋಫಿ ಎತ್ತುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನು ನೋಡಿ : BIKE ಮತ್ತು TIPPER ನಡುವೆ ಅಪ*ತ – ಠಾಣೆಯ ಮುಂದೆ ಮೃತ ವ್ಯಕ್ತಿಯ ಪೋಷಕರಿಂದ ಆಕ್ರೋಶ




