Yadgir ಜಿಲ್ಲೆಯಲ್ಲಿ ಮಾಜಿ ಸಚಿವ ರಾಜು ಗೌಡ ಅವರ ಕಾರು ಅಪಘಾತಕ್ಕೀಡಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ..

Yadgir : ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯ ಮುಗಿಸಿ ಆಂಧ್ರದ ವಿಶಾಖಪಟ್ಟಣದಿಂದ ಹೈದರಾಬಾದ್ ಮಾರ್ಗವಾಗಿ ಊರಿಗೆ ವಾಪಸ್ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಯಾದಗಿರಿ ನಗರದ ಗಂಜ್ ಪ್ರದೇಶದ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಟ್ರಕ್ ಒಂದು ರಾಜು ಗೌಡ ಅವರ ಕಾರಿಗೆ ಹಿಂದಿನಿಂದ ಗುದ್ದಿದೆ. ಪರಿಣಾಮ ಕಾರಿನ ಹಿಂಭಾಗ ಸಂಪೂರ್ಣವಾಗಿ ನುಜ್ಜು-ಗುಜ್ಜಾಗಿದೆ. ಆದರೆ, ಅದೃಷ್ಟವಶಾತ್ ಮಾಜಿ ಸಚಿವರು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ರಾಜು ಗೌಡ ಅವರಿಗೆ ಸ್ವಲ್ಪ ತರಚಿದ ಗಾಯಗಳಾಗಿದ್ದು, ತಕ್ಷಣವೇ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಪ್ರಸ್ತುತ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಕಲ್ಟ್ ಟ್ರೈಲರ್ ರಿಲೀಸ್ ಇದು – ಭಗ್ನ ಪ್ರೇಮಿಯ ಕತೆ..!!

ದೇವರ ಮತ್ತು ಜನರ ಆಶೀರ್ವಾದದಿಂದ ಸುರಕ್ಷಿತ – ರಾಜು ಗೌಡ
ಈ ಕುರಿತು ಪ್ರತಿಕ್ರಿಯಿಸಿದ ರಾಜು ಗೌಡ ಅವರು, “ಇಂದು ಮುಂಜಾನೆ ನಮ್ಮ ಕಾರು ಅಪಘಾತಕ್ಕೀಡಾಗಿದೆ. ಕಾರಿನ ಚಿತ್ರಗಳನ್ನು ನೋಡಿ ಹಲವರು ಆತಂಕಗೊಂಡು ಕರೆ ಮಾಡಿದ್ದಾರೆ. ಆದರೆ, ದೇವರ ಕೃಪೆ ಮತ್ತು ಜನರ ಆಶೀರ್ವಾದದಿಂದ ನಾನು ಸಂಪೂರ್ಣ ಸುರಕ್ಷಿತವಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆತಂಕಗೊಂಡರೂ, ಮಾಜಿ ಸಚಿವರು ಸುರಕ್ಷಿತವಾಗಿರುವುದು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನು ನೋಡಿ : ಗದಗ: ಆಂಜನೇಯ ದೇಗುಲದಲ್ಲಿ 3 ದಿನಗಳಿಂದ ನಿರಂತರ ನಿಗೂಢ ಗೆಜ್ಜೆ ಶಬ್ದ!




