Bidar ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪತಿ ಅಶ್ಲೀಲ ಮೆಸೇಜ್ಗಳು, ವರದಕ್ಷಿಣೆ ಬೇಡಿಕೆ, ಮಾನಸಿಕ ಹಿಂಸೆ ಹಾಗೂ ಜೀವ ಬೆದರಿಕೆ ನೀಡುತ್ತಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ

Bidar ನಲ್ಲಿ ಮಾನಸಿಕ ಹಿಂಸೆ ಹಾಗೂ ಜೀವ ಬೆದರಿಕೆ ನೀಡುತ್ತಿದ್ದಾನೆ ಎಂದು ಯುವತಿಯೋರ್ವರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಚಿಟಗುಪ್ಪ ಮೂಲದ ಪೊಲೀಸ್ ಕಾನ್ಸ್ಟೇಬಲ್ ಮಚೇಂದ್ರ ವಿರುದ್ಧ ಆತನ ಪತ್ನಿ ಸೀನಾ ಆರೋಪ ಮಾಡಿದ್ದಾರೆ.
ಪತಿ ಅಶ್ಲೀಲ ಮೆಸೇಜ್ ಕಳುಹಿಸುವುದರ ಜೊತೆಗೆ, ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಜೀವಕ್ಕೆ ಬೆದರಿಕೆ ಇರುವುದರಿಂದ ತನಗೆ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕೆಂದು ಸೀನಾ ಮನವಿ ಮಾಡಿದ್ದಾರೆ.
‘ಮಕ್ಕಳಿಲ್ಲ’ ಎಂಬ ಕಾರಣ ನೀಡಿ ವರದಕ್ಷಿಣೆ ಬೇಡಿಕೆ
ಸಂತ್ರಸ್ತೆ ಹೇಳುವಂತೆ, “ಮಕ್ಕಳಾಗಿಲ್ಲ ಎನ್ನುವ ಕಾರಣ ನೀಡಿ ಪತಿ ಮತ್ತೆ ವರದಕ್ಷಿಣೆ ಕೇಳುತ್ತಿದ್ದಾನೆ. ಈಗಾಗಲೇ ಮದುವೆಗೆ 26 ಲಕ್ಷ ರೂಪಾಯಿ ಖರ್ಚಾಗಿದೆ. ಆ ಸಾಲವೇ ಇನ್ನೂ ತೀರಿಲ್ಲ” ಎಂದು ಸೀನಾ ಕಣ್ಣೀರಿಟ್ಟಿದ್ದಾರೆ.
ಬೆಂಗಳೂರು ಮೈಕೋ ಲೇಔಟ್ ಟ್ರಾಫಿಕ್ ಠಾಣೆಯಲ್ಲಿ ಪಿಸಿ ಆಗಿರುವ ಮಚೇಂದ್ರ, ವರದಕ್ಷಿಣೆ ಕೊಡದಿದ್ದರೆ “ಅಕ್ಕನ ಮಗಳನ್ನೇ ಮದುವೆ ಆಗುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಇದೆ.
ಈ ಕುರಿತು ಮೈಕೋ ಲೇಔಟ್ ಠಾಣೆಯಲ್ಲಿ ದೂರು ನೀಡಿದರೂ ಯಾವುದೇ ಕ್ರಮ ಜರುಗಿಲ್ಲ ಎಂದು ಸಂತ್ರಸ್ತೆ ದೂರಿದ್ದಾರೆ.
ಇದನ್ನು ಓದಿ : Greather Bengaluru ಪ್ರಾಧಿಕಾರದ ಚುನಾವಣೆಗೆ ಮುಹೂರ್ತ ಫಿಕ್ಸ್
FIR ಇದ್ದರೂ ಪ್ರಯೋಜನ ಇಲ್ಲ?
ಈ ಹಿಂದೆ ಔರಾದ್ ತಾಲೂಕಿನ ಚಿಂತಾಕಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದರೂ, ಯಾವುದೇ ಫಲಿತಾಂಶ ಸಿಕ್ಕಿಲ್ಲ ಎಂದು ಸೀನಾ ಹೇಳಿದ್ದಾರೆ.
ಪೊಲೀಸ್ ಪತಿಯ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಇದೀಗ ಚರ್ಚೆಗೆ ಕಾರಣವಾಗಿದೆ.
ಡಿಸೆಂಬರ್ 14, 2022ರಂದು ಮಚೇಂದ್ರ ಮತ್ತು ಸೀನಾ ಮದುವೆಯಾಗಿ ಆರಂಭದಲ್ಲಿ ಬೆಂಗಳೂರಿನಲ್ಲಿ ಸುಖ ಜೀವನ ನಡೆಸಿದರು. ಬಳಿಕ “ಹುಷಾರಿಲ್ಲ” ಎಂದು ಹೇಳಿ ಪತ್ನಿಯನ್ನು ತವರು ಮನೆಗೆ ಬಿಟ್ಟು ಹೋದ ಪತಿ, 15 ತಿಂಗಳು ಕಳೆದರೂ ಆಕೆಯನ್ನು ವಾಪಸ್ ಕರೆದುಕೊಂಡು ಹೋಗಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ವರದಕ್ಷಿಣೆ ಬೇಡಿಕೆ ಆರಂಭವಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಇದನ್ನು ನೋಡಿ : ತಾಕತ್ತಿದ್ದರೆ ಅರಸೀಕೆರೆಗೆ ಬಂದು ಸ್ಪರ್ಧಿಸಿ H.D.ರೇವಣ್ಣಗೆ ಶಿವಲಿಂಗೇಗೌಡ ಚಾಲೆಂಜ್




