ಅದೆಷ್ಟೋ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವಾಗಿ Namma Metro ಕೆಲಸ ಮಾಡುತ್ತಿದೆ.

ಬೆಂಗಳೂರಿನ ಬಹುಮುಖ್ಯ ಸಾರಿಗೆ ವ್ಯವಸ್ಥೆಗಳಲ್ಲಿ Namma Metro ಸೇವೆ ಕೂಡಾ ಒಂದು. ಅದೆಷ್ಟೋ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವಾಗಿ ಮೆಟ್ರೋ ಕೆಲಸ ಮಾಡುತ್ತಿದೆ. ದಿನವಿಡೀ ಬ್ಯುಸಿ ಲೈಫ್ನಲ್ಲಿ ಜೀವನ ಸಾಗಿಸುತ್ತಿರುವ ಬೆಂಗಳೂರು ನಿವಾಸಿಗಳಿಗೆ ಇದೀಗ BMRCL ಗುಡ್ ನ್ಯೂಸ್ ನೀಡಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಮೆಟ್ರೋ ಸಂಪರ್ಕ 2027ರೊಳಗೆ ಆರಂಭವಾಗಲಿದೆ.
BMRCL ಈ ಕುರಿತು ಮಾಹಿತಿ
ಈ ಕುರಿತು ಮಾಹಿತಿಯನ್ನು BMRCL ಶುಕ್ರವಾರ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (BCIC) ಹಾಗೂ ದೆಹಲಿ ಮೂಲದ ಥಿಂಕ್ ಟ್ಯಾಂಕ್ ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ (TERI) ಜಂಟಿ ವೇದಿಕೆಯಲ್ಲಿ ನೀಡಿದೆ.
ಇದನ್ನು ಓದಿ : Breaking |ಚಿಕ್ಕಪ್ಪನ ಮನೆಗೆ ಬಂದಿದ್ದ ಯುವತಿ Suicide – ಯಾಕೆ?

ಮೆಟ್ರೋ ಕಾರಿಡಾರ್ ವಿವರ
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೊಸ ಮೆಟ್ರೋ ಕಾರಿಡಾರ್ 58.19 ಕಿ.ಮೀ ವಿಸ್ತಾರ ಹೊಂದಿದ್ದು, ಎರಡು ಹಂತಗಳಲ್ಲಿ ನಿರ್ಮಾಣವಾಗಲಿದೆ:
- ಹಂತ 2ಎ: 19.75 ಕಿ.ಮೀ
- ಹಂತ 2ಬಿ: 38.44 ಕಿ.ಮೀ
ಈ ಯೋಜನೆ ಪೂರ್ಣಗೊಂಡರೆ, ಬೆಂಗಳೂರು ಮೆಟ್ರೋ ಜಾಲ 175 ಕಿಲೋಮೀಟರ್ ವಿಸ್ತಾರವನ್ನು ಹೊಂದಲಿದೆ. ಈ ಹೊಸ ಕಾರಿಡಾರ್ ‘ಬ್ಲೂಲೈನ್’ ಅಥವಾ ‘ಔಟರ್ ರಿಂಗ್ ರೋಡ್ ಏರ್ಪೋರ್ಟ್ ಮಾರ್ಗ’ ಎಂದು ಕರೆಯಲಾಗಿದೆ.
ಪ್ರಯೋಜನಗಳು
- ವಿಮಾನ ನಿಲ್ದಾಣಕ್ಕೆ ನೇರ, ವೇಗವಾದ ಮೆಟ್ರೋ ಸಂಪರ್ಕ
- ಐಟಿ ವಲಯಗಳು ಮತ್ತು ಪ್ರಮುಖ ವ್ಯಾಪಾರ ಪ್ರದೇಶಗಳಿಗೆ ಸುಲಭ ಸಂಪರ್ಕ
- ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮತ್ತೊಂದು ಮಹತ್ವಪೂರ್ಣ ಸಾಧನೆ

“ಈ ಮೆಟ್ರೋ ಮಾರ್ಗ ಆರಂಭವಾದರೆ, ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತದೆ. ಪ್ರಯಾಣಿಕರಿಗೆ ಅನುಕೂಲ ಹೆಚ್ಚಾಗುವುದು, ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಸಹಾಯವಾಗುವುದು” ಎಂದು BMRCL ಅಧ್ಯಕ್ಷರು ಹೇಳಿದ್ದಾರೆ.
2027ರ ಅಂತ್ಯದೊಳಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ, ಮತ್ತು ನಗರವಾಸಿಗಳಿಗೆ ಇದು ಬಹುದಿನದ ಬಹುಕಾಲ ನಿರೀಕ್ಷಿತ ಸೌಲಭ್ಯವಾಗಲಿದೆ.
ಇದನ್ನು ನೋಡಿ : ಸೌರವ್ ಗಂಗೂಲಿ ದಾಖಲೆ ಹಿಂದಿಕ್ಕಿದ ವಿರಾಟ್ ಕೊಹ್ಲಿ




