BBK S12 : ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು ರಘು ಮತ್ತು ಗಿಲ್ಲಿ ಜೊತೆ ಆಪ್ತವಾಗಿರುವುದು ಈಗಾಗಲೇ ಎಲ್ಲರಿಗೂ ತಿಳಿದ ಸಂಗತಿ.

BBK S12 : ಆದರೆ ಇವರ ನಡುವಿನ ಈ ಆಪ್ತತೆ ಬಗ್ಗೆ ಆಗಾಗ್ಗೆ ಮನೆಮಂದಿಯಲ್ಲಿ ಹಾಗೂ ವೀಕ್ಷಕರಲ್ಲಿ ಪ್ರಶ್ನೆಗಳು ಮೂಡುತ್ತಿವೆ.

ಆಪ್ತತೆ ವಿಚಾರಕ್ಕೆ ಕಿಚ್ಚನ ಪ್ರಶ್ನೆ
ರಕ್ಷಿತಾ ಅವರು ರಘು ಮತ್ತು ಗಿಲ್ಲಿಯ ಹೊರತು ಬೇರೆ ಯಾರಾದರೂ ಹತ್ತಿರವಾದರೆ ಸಹಿಸೋದಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ. ಈ ವಿಷಯವನ್ನು ಗಮನಿಸಿದ ಕಿಚ್ಚ ಸುದೀಪ್, ‘ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ?’ ಎಂದು ನೇರವಾಗಿ ಪ್ರಶ್ನಿಸಿ ಪಂಚಾಯ್ತಿಯಲ್ಲಿ ಪಾಠ ಮಾಡಿದ್ದಾರೆ.

ಈ ವಾರದ ಕೊನೆಯ ಕಿಚ್ಚನ ಪಂಚಾಯ್ತಿ
ಇದು ಈ ಸೀಸನ್ನಲ್ಲಿ ನಡೆಯುವ ಕೊನೆಯ ಕಿಚ್ಚನ ಪಂಚಾಯ್ತಿ ಆಗಿದೆ. ಕಾರಣ, ಮುಂದಿನ ವಾರವೇ ಬಿಗ್ ಬಾಸ್ ಫಿನಾಲೆ ನಡೆಯಲಿದ್ದು, ಅದಕ್ಕಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಇದನ್ನು ಓದಿ : Nelamangala|ಗಂಡ-ಹೆಂಡತಿ ನಡುವೆ ಗಲಾಟೆ – ನೇಣಿಗೆ ಕೊರಳೊಡ್ಡಿದ ಹೆಂಡತಿ

ಈ ವಾರ ನಾಮಿನೇಷನ್ ಯಾರಿಗೆ?
ಈ ವಾರ ಧನುಷ್ ಹೊರತುಪಡಿಸಿ ಉಳಿದ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ನಾಮಿನೇಷನ್ ಪಟ್ಟಿಯಲ್ಲಿ ಇರುವವರು:
- ಕಾವ್ಯಾ
- ಗಿಲ್ಲಿ
- ರಕ್ಷಿತಾ ಶೆಟ್ಟಿ
- ಅಶ್ವಿನಿ ಗೌಡ
- ರಘು
- ರಾಶಿಕಾ
- ಅಶ್ವಿನಿ
- ಧ್ರುವಂತ್
ಇವರ ಪೈಕಿ ಒಬ್ಬರು ಈ ವಾರವೇ ಎಲಿಮಿನೇಟ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಅಂತಿಮ ನಿರ್ಧಾರ ಶೀಘ್ರವೇ ಹೊರಬೀಳಲಿದೆ.
ಬಿಗ್ ಬಾಸ್ ಮನೆಯಲ್ಲಿ ಹೈ ವೋಲ್ಟೇಜ್ ಡ್ರಾಮಾ
ಫಿನಾಲೆ ಸಮೀಪಿಸುತ್ತಿರುವಂತೆ ಬಿಗ್ ಬಾಸ್ ಮನೆಯಲ್ಲಿ ತೀವ್ರ ಡ್ರಾಮಾ, ಸಂಬಂಧಗಳ ಬಿರುಕು ಮತ್ತು ಭಾವನಾತ್ಮಕ ಕ್ಷಣಗಳು ಹೆಚ್ಚಾಗುತ್ತಿವೆ. ರಕ್ಷಿತಾ ವಿಚಾರವಾಗಿ ನಡೆದ ಪಂಚಾಯ್ತಿ ಈ ವಾರದ ಪ್ರಮುಖ ಹೈಲೈಟ್ ಆಗಿದೆ.
ಇದನ್ನು ನೋಡಿ : ಮಹಿಳೆಗೆ ಬಾಳು ಕೊಡೋದಾಗಿ ಮಗು ಮಾಡಿ, 36 ಲಕ್ಷ ಪಡೆದು ವ್ಯಕ್ತಿ ಪರಾರಿ!

