Vijayalakshmi ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ ಪ್ರಕರಣದ ತನಿಖೆ ಕೊನೇ ಹಂತಕ್ಕೆ ಬಂದು ನಿಂತಿದೆ.

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ Social Media ದಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್ಗಳನ್ನು ಮಾಡಿದ ಪ್ರಕರಣದ ತನಿಖೆ ಇದೀಗ ಕೊನೆಯ ಹಂತಕ್ಕೆ ತಲುಪಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ FIR ಆಧಾರವಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Vijayalakshmi ಅವರಿಗೆ ಅಶ್ಲೀಲ ಕಾಮೆಂಟ್
ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಾಮೆಂಟ್ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿಗಳಲ್ಲಿ Actor Sudeep ಅಭಿಮಾನಿಗಳು ಕೂಡ ಸೇರಿದ್ದಾರೆ. ಬಂಧಿತರಲ್ಲಿ ಸಾಫ್ಟ್ವೇರ್ ಎಂಜಿನಿಯರ್, ಪೆಟ್ರೋಲ್ ಬಂಕ್ ಮ್ಯಾನೇಜರ್ ಕೂಡ ಸೇರಿದ್ದಾರೆ.
ಇದನ್ನು ಓದಿ : ಮಹಿಳೆಗೆ ಬಾಳು ಕೊಡ್ತೇನೆಂದು ನಂಬಿಸಿ ಕೈಗೆ ಮಗು ಕೊಟ್ಟು ವ್ಯಕ್ತಿ Escape!

ಚಾರ್ಜ್ಶೀಟ್ ಸಲ್ಲಿಕೆ
ಬಂಧಿತ ಆರೋಪಿಗಳ ವಿರುದ್ಧ 60 ದಿನ ಗಳಲ್ಲಿ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಬೇಕಿತ್ತು. ಹಾಗಾಗಿ ಬಂಧಿತರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ಉಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇದನ್ನು ನೋಡಿ : ʻಟಾಕ್ಸಿಕ್ʼ ಚಿತ್ರದಲ್ಲಿ ಅಬ್ಬರಿಸಿದ ಹಾಲಿವುಡ್ ವಿಲನ್; ಯಾರೀ ಕೈಲ್ ಪಾಲ್?




