The Raja Saab ಸಿನಿಮಾ ಜನವರಿ 9ರಂದು ಅದ್ಧೂರಿಯಾಗಿ ತೆರೆಕಂಡಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮೊದಲ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ.

ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಹಾರರ್ ಫ್ಯಾಂಟಸಿ ಸಿನಿಮಾ ‘ದಿ ರಾಜಾ ಸಾಬ್’ ಜನವರಿ 9ರಂದು ಅದ್ದೂರಿಯಾಗಿ ವಿಶ್ವದಾದ್ಯಂತ ತೆರೆಕಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿರುವ ಈ ಚಿತ್ರ, ಮೊದಲ ದಿನವೇ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಂಡಿದೆ.
ಆದರೆ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಮರ್ಶಕರಿಂದಲೂ ಹೆಚ್ಚಿನ ಮೆಚ್ಚುಗೆ ಸಿಗದಿರುವುದು ಗಮನಾರ್ಹವಾಗಿದೆ.
ಮೊದಲ ದಿನದ ಕಲೆಕ್ಷನ್ ಎಷ್ಟು?
ಸ್ಯಾಕ್ನಿಲ್ಕ್ ವರದಿ ಪ್ರಕಾರ, ‘ದಿ ರಾಜಾ ಸಾಬ್’ ಸಿನಿಮಾ ಮೊದಲ ದಿನ ಸುಮಾರು 63.30 ಕೋಟಿ ರೂ. ಗಳಿಕೆ ಮಾಡಿದೆ. ಇದರಲ್ಲಿ ಹಿಂದಿನ ದಿನ ನಡೆದ ಪೇಯ್ಡ್ ಪ್ರೀಮಿಯರ್ ಶೋಗಳ ಆದಾಯವೂ ಸೇರಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, ಒಟ್ಟು ಕಲೆಕ್ಷನ್ನಲ್ಲಿ ತೆಲುಗು ವರ್ಷನ್ನ ಪಾಲು ಹೆಚ್ಚಾಗಿದೆ.

- ತೆಲುಗು ವರ್ಷನ್: ಸುಮಾರು 56 ಕೋಟಿ ರೂ.
- ಹಿಂದಿ ವರ್ಷನ್: 6+ ಕೋಟಿ ರೂ.
- ಕನ್ನಡ, ತಮಿಳು ಹಾಗೂ ಮಲಯಾಳಂ ವರ್ಷನ್ಗಳ ಒಟ್ಟು ಗಳಿಕೆ: 1 ಕೋಟಿ ರೂ.ಗೂ ಕಡಿಮೆ
ಕೊಂಚ ಕಡಿಮೆ
ಪ್ರಭಾಸ್ ಅವರ ಹಿಂದಿನ ಸಿನಿಮಾಗಳಾದ ಬಾಹುಬಲಿ 2 (120 ಕೋಟಿ ರೂ.+), ಸಲಾರ್, ಕಲ್ಕಿ, ಆದಿಪುರುಷ್, ಸಾಹೋ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದ್ದವು.
ಆ ಹಿನ್ನಲೆಯಲ್ಲಿ ನೋಡಿದರೆ, The Raja Saab ಮೊದಲ ದಿನದ ಕಲೆಕ್ಷನ್ ಪ್ರಭಾಸ್ ಜನಪ್ರಿಯತೆಗೆ ಹೋಲಿಸಿದರೆ ಕೊಂಚ ಕಡಿಮೆಯೇ ಎನ್ನಲಾಗುತ್ತಿದೆ.
ಇದನ್ನು ಓದಿ : Nelamangala|ಗಂಡ-ಹೆಂಡತಿ ನಡುವೆ ಗಲಾಟೆ – ನೇಣಿಗೆ ಕೊರಳೊಡ್ಡಿದ ಹೆಂಡತಿ

ಭರ್ಜರಿ ಶೋಗಳು
‘ದಿ ರಾಜಾ ಸಾಬ್’ ಸಿನಿಮಾಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಶೋಗಳು ಲಭಿಸಿವೆ. ಕೇವಲ ತೆಲುಗು ವರ್ಷನ್ಗೆ ಮಾತ್ರವೇ 980ಕ್ಕೂ ಹೆಚ್ಚು ಶೋಗಳು ಸಿಕ್ಕಿದ್ದು, ಉಳಿದ ಎಲ್ಲಾ ವರ್ಷನ್ಗಳನ್ನು ಸೇರಿಸಿದರೆ 50ಕ್ಕೂ ಹೆಚ್ಚು ಶೋಗಳು ದೊರೆತಿವೆ.
ಇದೇ ಮಾದರಿಯಲ್ಲಿ ಹೈದರಾಬಾದ್ನಲ್ಲೂ ಸಮಾನ ಸಂಖ್ಯೆಯ ಶೋಗಳನ್ನು ನೀಡಲಾಗಿದೆ.
ಸಿನಿಮಾ ಹೇಗಿದೆ?
ಪ್ರಭಾಸ್ ಮತ್ತು ನಿರ್ದೇಶಕ ಮಾರುತಿ ಕಾಂಬಿನೇಷನ್ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಬಹುತೇಕ ಪ್ರೇಕ್ಷಕರು ನೆಗೆಟಿವ್ ರಿವ್ಯೂ ನೀಡಿದ್ದು, ವಿಮರ್ಶಕರಿಂದಲೂ ಉತ್ತಮ ರೇಟಿಂಗ್ ಸಿಕ್ಕಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಏರಿಕೆ ಕಾಣುತ್ತದೆಯೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ರಾಜಾ ಸಾಬ್ ಎಷ್ಟು ಕೋಟಿ ಸಿನಿಮಾ ಗೊತ್ತಾ?
ಸುಮಾರು 400 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಕೇವಲ ಚಿತ್ರಮಂದಿರಗಳಲ್ಲಿ ಯಶಸ್ವಿ ಯಾಗಬೇಕಾದರೆ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಬೇಕಾದ ಅನಿವಾರ್ಯತೆ ಇದೆ.
ಮುಂದಿನ ದಿನಗಳಲ್ಲಿ ‘ದಿ ರಾಜಾ ಸಾಬ್’ ಬಾಕ್ಸ್ ಆಫೀಸ್ ಪ್ರದರ್ಶನ ಹೇಗಿರಲಿದೆ ಎಂಬುದು ಕಾದು ನೋಡಬೇಕಿದೆ.

ಇದನ್ನು ನೋಡಿ : ಮಹಿಳೆಗೆ ಬಾಳು ಕೊಡೋದಾಗಿ ಮಗು ಮಾಡಿ, 36 ಲಕ್ಷ ಪಡೆದು ವ್ಯಕ್ತಿ ಪರಾರಿ!




