
MYSURU DASRA : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2025ಕ್ಕೆ ಇಂದು ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಲೇಖಕಿ ಬಾನು ಮುಷ್ತಾಕ್ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಶುಭಾರಂಭ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸಿದ್ದರು ಇತಿಹಾಸ ತಿರುಚಬೇಡಿ ಎಂದರು.
“ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಆಚರಣೆ ಪ್ರಾರಂಭವಾಯಿತು. ನಂತರ ಮೈಸೂರು ಅರಸರು ಇದನ್ನು ಮುಂದುವರೆಸಿದರು. ಶ್ರೀರಂಗಪಟ್ಟಣದಲ್ಲಿದ್ದ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರೂ ಈ ಹಬ್ಬವನ್ನು ಆಚರಿಸುತ್ತಿದ್ದರು. ಇತಿಹಾಸವನ್ನು ರಾಜಕೀಯ ಉದ್ದೇಶಕ್ಕೆ ಬದಲಾಯಿಸಬಾರದು. ನಿಜವಾದ ಇತಿಹಾಸವನ್ನು ಈ ಪೀಳಿಗೆಗೆ ತಲುಪಿಸಲು ಇತಿಹಾಸಕಾರರು ಮುಂದಾಗಬೇಕು.”
ಆ ಕಾರಣಕ್ಕಾಗಿಯೇ ಸಂವಿಧಾನದ ಪೀಠಿಕೆಯನ್ನು ಪ್ರತಿಯೊಂದು ಶಾಲೆಯಲ್ಲೂ ಓದಬೇಕೆಂದು ಮಾಡಿ ದ್ದೇವೆ. ಇತಿಹಾಸವನ್ನ ತಿರುಚಿ ರಾಜಕೀಯಕ್ಕೋಸ್ಕರ ಮಾಡಬಾರದು. ರಾಜಕೀಯ ಮಾಡೋಣ ಅಂದ್ರೆ ಬಹಳಷ್ಟು ಇದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಇಲ್ಲ ಸಲ್ಲದ ದ್ವೇಷಕ್ಕೋಸ್ಕರ ರಾಜಕಾರಣ ಮಾಡಬಾರದು ಎಂದು ಹೇಳಿದರು.




